ನ. 23ರಂದು ಮೀಲಾದ್, ಮೌಲೂದ್ ಕಾರ್ಯಕ್ರಮ
ಮಂಗಳೂರು, ನ. 22: ಎಸ್ಕೆಎಸೆಸೆಫ್ ಮಂಗಳನಗರ ಕ್ಲಸ್ಟರ್ ವತಿಯಿಂದ ನ. 23ರಂದು ಸಂಜೆ 4 ಗಂಟೆಗೆ ನಾಟೆಕಲ್ ಮಂಗಳನಗರದ ಜಾಮಿಯಾ ಮಸೀದಿಯಲ್ಲಿ ಮೀಲಾದ್ ಭಾಷಣ ಮತ್ತು ವೌಲಿದ್ ಕಾರ್ಯಕ್ರಮ ನಡೆಯಲಿದೆ.
ಮಸೀದಿ ಸಮಿತಿಯ ಅಧ್ಯಕ್ಷ ಮೊದಿನ್ ಕುಂಞಿ ಹಾಜಿ ಮರಾಠಿಮೂಲೆ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಅಬ್ದುಲ್ ಖಾದರ್ ಶಾಫಿ ಉದ್ಘಾಟಿಸಲಿದ್ದಾರೆ. ಫತ್ತಾಹ್ ಫೈಝಿ ಕಿನ್ಯ, ಹಾರೂನ್ ಅಹ್ಸನಿ ಕಿನ್ಯ, ಅಬ್ದುರ್ರಹ್ಮಾನ್ ದಾರಿಮಿ ತಬೂಕ್, ಝೈನ್ ಸಖಾಫಿ ಉಳ್ಳಾಲ, ಅಝೀಝ್ ಫೈಝಿ ಪಟ್ಟೋರಿ, ಅನೀಫ್ ನಿಝಾಮಿ ಉರುಮನೆ, ಅಬೂಬಕರ್ ದಾರಿಮಿ, ಅಬ್ದುಲ್ ಅಝೀಝ್ ಶಾಫಿ, ಶರೀಫ್ ಅರ್ಶದಿ ದೇರಳಕಟ್ಟೆ, ನಝೀಬ್ ಹುದ ಮೋಂಟುಗೋಳಿ ಭಾಗವಹಿಸಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಮುಸ್ತಫ ಫೈಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





