ಪತಿಯಿಂದ ಮಾನಸಿಕ ಹಿಂಸೆ: ಪತ್ನಿ ದೂರು
ಉಡುಪಿ, ನ.22: ಪ್ರೀತಿಸಿ ಮದುವೆಯಾದ ಪತಿ ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ಕೋಟೇಶ್ವರ ಮೂಡುಗೋಪಾಡಿಯ ಸುರಯ್ಯ ಅಂಜುಮ್ ಯಾನೆ ಅಂಜಲಿ(24) ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಕೆ ಪುತ್ತೂರಿನ ಗಿರೀಶ್ (34) ಎಂಬಾತನನ್ನು ಪ್ರೀತಿಸಿ 2012ರ ಡಿ.2ರಂದು ಮೂಡಿಗೆರೆಯ ಹನುಮಾನ್ ದೇವಸ್ಥಾನದಲ್ಲಿ ವಿವಾಹ ವಾಗಿದ್ದು, ಅವರಿಗೆ ನೆಹಾನ್ ಎಂಬ ಮೂರು ವರ್ಷದ ಮಗು ಇದೆ. ಮದುವೆ ಯಾದ ನಾಲ್ಕು ತಿಂಗಳಿನಿಂದ ಗಿರೀಶ್ ಪತ್ನಿ ಅಂಜುಮ್‌ಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು, ಕೆಲಸ ಮಾಡುವ ಕಚೇರಿಗೆ ಕರೆ ಮಾಡಿ ಕಿರುಕುಳ ನೀಡುತ್ತಿರುವುದಲ್ಲದೆ ಪೊಲೀಸರಿಗೆ ದೂರು ಕೊಟ್ಟರೆ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





