ಶ್ರೀನಗರದ ಸೈನಿಕ ಶಾಲೆಗೆ ಧೋನಿ ದಿಢೀರ್ ಭೇಟಿ
ಹೊಸದಿಲ್ಲಿ, ನ.23: ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ರ್ಯಾಂಕ್ ಪಡೆದಿರುವ ಕ್ರಿಕೆಟಿಗ ಎಂ.ಎಸ್. ಧೋನಿ ಬುಧವಾರ ಶ್ರೀಗರದ ಆರ್ಮಿ ಪಬ್ಲಿಕ್ ಸ್ಕೂಲ್ಗೆ ಅಚ್ಚರಿ ಭೇಟಿ ನೀಡಿದರು.
‘‘ಲೆ.ಕರ್ನಲ್(ಗೌರವ)ಮಹೇಂದ್ರ ಸಿಂಗ್ ಧೋನಿ ಸೈನಿಕ ಶಾಲೆೆಯ ಮಕ್ಕಳೊಂದಿಗೆ ಉತ್ಸಾಹದಿಂದ ಬೆರೆತರು. ಶಿಕ್ಷಣ ಹಾಗೂ ಕ್ರೀಡೆಯ ಮಹತ್ವದ ಬಗ್ಗೆ ಒತ್ತಿ ಹೇಳಿದರು’’ ಎಂದು ಧೋನಿ ಶಾಲಾ ಮಕ್ಕಳೊಂದಿಗಿರುವ ಫೋಟೊಗಳೊಂದಿಗೆ ಭಾರತದ ಸೇನೆಯ ಚೀನಾರ್ ಕಾರ್ಪ್ಸ್ ತನ್ನ ಅಧಿಕೃತ ಟ್ವಿಟರ್ ಪೇಜ್ನಲ್ಲಿ ಟ್ವೀಟ್ ಮಾಡಿದೆ.
ಭಾರತ ಕ್ರಿಕೆಟ್ ತಂಡ ಪ್ರಸ್ತುತ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಧೋನಿ 2014ರಲ್ಲಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ. ಆ ನಂತರ ಅವರು ಭಾರತದ ಪರ ಏಕೈಕ ಏಕದಿನ ಹಾಗೂ ಟ್ವೆಂಟಿ-20 ಪಂದ್ಯವನ್ನಾಡಿದ್ದಾರೆ. ಧೋನಿ ಡಿ.10 ರಂದು ಶ್ರೀಲಂಕಾ ವಿರುದ್ಧ ಆರಂಭವಾಗಲಿರುವ ಸೀಮಿತ ಓವರ್ಗಳ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿದ್ದಾರೆ.
Next Story