ಐತಿಹಾಸಿಕ ಚುನಾವಣೆ: ಚೀನಾ, ಭಾರತ ಗಡಿ ಮುಚ್ಚಿದ ನೇಪಾಳ

ಕಠ್ಮಂಡು (ನೇಪಾಳ), ನ. 24: ಐತಿಹಾಸಿಕ ಸಂಸದೀಯ ಮತ್ತು ಪ್ರಾಂತೀಯ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ನೇಪಾಳ ಶುಕ್ರವಾರ ಭಾರತ ಮತ್ತು ಚೀನಾಗಳೊಂದಿಗಿನ ಗಡಿಯನ್ನು ಮುಚ್ಚಿದೆ.
ನೇಪಾಳದಲ್ಲಿ ನವೆಂಬರ್ 26 ಮತ್ತು ಡಿಸೆಂಬರ್ 7ರಂದು ಎರಡು ಹಂತಗಳಲ್ಲಿ ಪ್ರಾಂತೀಯ ಮತ್ತು ಸಂಸದೀಯ ಚುನಾವಣೆಗಳು ನಡೆಯಲಿವೆ.
ದೇಶವು ಪ್ರಜಾಪ್ರಭುತ್ವದತ್ತ ತನ್ನ ಪ್ರಯಾಣವನ್ನು ಆರಂಭಿಸಿದ 11 ವರ್ಷಗಳ ಬಳಿಕ ಈ ಮಹತ್ವದ ಚುನಾವಣೆಗಳು ನಡೆಯುತ್ತಿವೆ.
2006ರವರೆಗೆ ದೇಶದಲ್ಲಿ ನಡೆದ ಆಂತರಿಕ ಹಿಂಸಾಚಾರದಲ್ಲಿ 16,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
Next Story





