ಟ್ರ್ಯಾಕ್ಟರ್‌ನಿಂದ ಆಯತಪ್ಪಿ ಬಿದ್ದು ಯುವಕ ಮೃತ್ಯು
ಶಿವಮೊಗ್ಗ, ನ. 24: ಟ್ರ್ಯಾಕ್ಟರ್‌ನಿಂದ ಆಯತಪ್ಪಿಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ತಿಮ್ಮಪ್ಪನಮಟ್ಟಿಯಲ್ಲಿ ನಡೆದಿದೆ.
ಯಡೇಹಳ್ಳಿ ಗ್ರಾಮದ ಸುರೇಶ್ (25) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಹೊಲದಲ್ಲಿದ್ದ ಮುಸುಕಿನ ಜೋಳದ ತೆನೆ ಯನ್ನು ಟ್ರ್ಯಾಕ್ಟರ್‌ನಲ್ಲಿ ಹೇರಿಕೊಂಡು ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಚಾಲಕನು ವೇಗವಾಗಿ ಟ್ರ್ಯಾಕ್ಟರ್‌ನ್ನು ಗದ್ದೆಯ ಬದು ಇಳಿಸಿದ್ದರಿಂದ ಇಂಜಿನ್ ಬಳಿ ಕುಳಿತಿದ್ದ ಲೋಕೇಶ್ ಕೆಳಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಇವರ ಮೇಲೆಯೇ ಟ್ರಾಲಿಯ ಚಕ್ರ ಹರಿದು ಹೋಗಿದೆ.
ಈ ಸಂಬಂಧ ಚಾಲಕನ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





