ಸಿಂಧು ಸೆಮಿಫೈನಲ್ ಗೆ
ಹಾಂಕಾಂಗ್ ಓಪನ್

ಹಾಂಕಾಂಗ್, ನ.24: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಹಾಂಕಾಂಗ್ ಓಪನ್ ಸೂಪರ್ ಸರಣಿಯಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಇಲ್ಲಿ ಶುಕ್ರವಾರ 37 ನಿಮಿಷಗಳಲ್ಲಿ ಕೊನೆಗೊಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು 5ನೇ ಶ್ರೇಯಾಂಕದ ಜಪಾನ್ ಆಟಗಾರ್ತಿ ಅಕಾನೆ ಯಮಗುಚಿ ಅವರನ್ನು 21-12, 21-19 ಗೇಮ್‌ಗಳಿಂದ ಮಣಿಸಿದ್ದಾರೆ. ಸಿಂಧು ಜಪಾನ್ ಆಟಗಾರ್ತಿ ವಿರುದ್ಧ ಆಡಿರುವ 6 ಪಂದ್ಯಗಳ ಪೈಕಿ ನಾಲ್ಕನೇ ಜಯ ಸಾಧಿಸಿದ್ದಾರೆ. ಸಿಂಧು ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್‌ನ ಆರನೇ ಶ್ರೇಯಾಂಕದ ರಚನೊಕ್ ಇಂತನಾನ್‌ರನ್ನು ಎದುರಿಸಲಿದ್ದಾರೆ. ಇಂತನಾನ್ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಕೆನಡಾದ ಮಿಚೆಲ್ ಲೀ ಅವರನ್ನು ಮಣಿಸಿದ್ದರು.
Next Story





