ಹಣ ದುರುಪಯೋಗ ಸಾಬೀತು: ಇಬ್ಬರು ಅಧಿಕಾರಿಗಳ ಸೇವೆಯಿಂದ ವಜಾ
ಮಂಡ್ಯ, ನ.24: ಮೈಸೂರು ಮಹಾನಗರ ಪಾಲಿಕೆಯ ಕೋಟ್ಯಂತರ ಹಣ ದುರುಪಯೋಗ ಪ್ರಕರಣ ಸಂಬಂಧ ಜಿಲ್ಲೆಯ ಶ್ರೀರಂಗಪಟ್ಟಣ ಪುರಸಭೆ ಮುಖ್ಯಾಧಿಕಾರಿ ಮತ್ತು ಚಾಮರಾಜನಗರ ಚಾಮರಾಜನಗರ ನಗರಸಭೆ ಪೌರಾಯುಕ್ತರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಮೈಸೂರು ನಗರ ಮಹಾನಗರ ಪಾಲಿಕೆಯಲ್ಲಿ ಸಮುದಾಯ ಸಂಘಟನಾಧಿಕಾರಿಗಳಾಗಿದ್ದ ಶ್ರೀರಂಗಪಟ್ಟಣ ಪುರಸಭೆ ಮುಖ್ಯಾಧಿಕಾರಿ ಎಸ್.ಲೋಕೇಶ್ ಮತ್ತು ಚಾಮರಾಜನಗರ ನಗರಸಭೆ ಪೌರಾಯುಕ್ತ ಎಂ.ರಾಜಣ್ಣ ಅವರನ್ನು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಡಾ.ಆರ್.ವಿಶಾಲ್ ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ರಾಜಣ್ಣ ಮತ್ತು ಲೋಕೇಶ್ ಮೈಸೂರು ಮಹಾನಗರ ಪಾಲಿಕೆಯಲ್ಲಿ 1,61,20,250 ರೂ.ಗಳ ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಿಂದ ಸಾಬೀತಾತ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ. ಜತೆಗೆ, ಎಂ.ರಾಜಣ್ಣ ಅವರಿಂದ 80,60,125 ರೂ. ಹಾಗು ಎಸ್.ಲೋಕೇಶ್ ಅವರಿಂದ 80,60,125 ರೂ.ಗಳನ್ನು ಶೇ.8ರ ಸರಳ
ಬಡ್ಡಿಯೊಂದಿಗೆ ವಸೂಲಿ ಮಾಡುವಂತೆ ಆದೇಶಿಸಲಾಗಿದೆ.
Next Story





