ಯುನೊಪ್ಯಾಕ್‌ಗೆ ಡಾ.ಎಂ.ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ

ಬೆಂಗಳೂರು, ನ. 24: ಉತ್ಪಾದನಾ ಶ್ರೇಷ್ಠತೆಗಾಗಿ ನೀಡಲ್ಪಡುವ ಪ್ರತಿಷ್ಠಿತ ಡಾ. ಎಂ.ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿಗೆ ಮಂಗಳೂರಿನ ಯುನೊಪ್ಯಾಕ್ ಇಂಡಸ್ಟ್ರೀಸ್ ಪಾತ್ರವಾಗಿದೆ.
ಬೆಂಗಳೂರಿನ ಬಿಇಐಸಿಯಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ರಾಜ್ಯ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ಸಣ್ಣ ಕೈಗಾರಿಕೆಗಳ ಸಚಿವೆ ಮೋಹನ ಕುಮಾರಿ ಮತ್ತು ಝೆಕ್ ಗಣರಾಜ್ಯದ ರಾಯಬಾರಿ ಕ್ರಿಶ್ ಗೋಪಾಲಕೃಷ್ಣ ಹಾಗೂ ಇತರ ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ಯುನೊಪ್ಯಾಕ್ ಸಂಸ್ಥೆಯ ಸಿಇಒ ಬಿ.ಎ.ನಝೀರ್ ಸ್ವೀಕರಿಸಿದರು.
Next Story





