ಬ್ರೆಝಿಲ್ ಸ್ಟ್ರೈಕರ್ ರಾಬಿನ್ಹೊಗೆ 9 ವರ್ಷ ಸಜೆ
.jpg)
ರೋಮ್,ನ.24: 2013ರಲ್ಲಿ ಅಲ್ಬಾನಿಯನ್ ಮಹಿಳೆಯೊಬ್ಬರ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾದ ಆರೋಪದಲ್ಲಿ ಎಸಿ ಮಿಲನ್ ಹಾಗೂ ಬ್ರೆಝಿಲ್ ಫುಟ್ಬಾಲ್ ತಂಡದ ಫಾರ್ವರ್ಡ್ ಆಟಗಾರ ರಾಬಿನ್ಹೊಗೆ ಇಟಲಿ ನ್ಯಾಯಾಲಯ 9 ವರ್ಷಗಳ ಜೈಲು ಶಿಕ್ಷೆ ತೀರ್ಪು ಪ್ರಕಟಿಸಿದೆ. ರಾಬಿನ್ಹೊ ಹಾಗೂ ಇತರ ಐವರು ಬ್ರೆಝಿಲ್ ಆಟಗಾರರು ಡಿಸ್ಕೋಥೆಕ್‌ನಲ್ಲಿ ಮದ್ಯ ಸೇವಿಸಿದ ಬಳಿಕ 22ರ ಹರೆಯದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಮಿಲನ್ ನ್ಯಾಯಾಲಯ ತೀರ್ಪು ನೀಡಿದೆ. ರಾಬಿನ್ಹೊ ಅವರೊಂದಿಗಿದ್ದ ಇತರ ಐವರು ಈಗ ಎಲ್ಲಿದ್ದಾರೆಂದು ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಐವರ ವಿರುದ್ಧ ವಿಚಾರಣೆಯನ್ನು ತಡೆಹಿಡಿಯಲಾಗಿದೆ. 33ರ ಹರೆಯದ ರಾಬಿನ್ಹೊ ಪ್ರಸ್ತುತ ಬ್ರೆಝಿಲ್‌ನಲ್ಲಿ ಅಟ್ಲೆಟಿಕೊ ಮಿನೆರೊ ತಂಡದಲ್ಲಿ ಆಡುತ್ತಿದ್ದಾರೆ. ರಾಬಿನ್ಹೊ ತಪ್ಪು ಮಾಡಿಲ್ಲ ಎಂದು ಅವರ ವಕೀಲರು ವಾದಿಸಿದ್ದು ಇಟಲಿಯಲ್ಲಿ ನಡೆದ ಯಾವುದೇ ವಿಚಾರಣೆಯಲ್ಲಿ ರಾಬಿನ್ಹೊ ಹಾಜರಾಗಿಲ್ಲ.
ರಾಬಿನ್ಹೊ ಬ್ರೆಝಿಲ್‌ನ ಪರ 100 ಪಂದ್ಯಗಳನ್ನು ಆಡಿದ್ದು, ಒಟ್ಟು 28 ಗೋಲುಗಳನ್ನು ಬಾರಿಸಿದ್ದಾರೆ.





