ಬ್ರಹ್ಮಾವರ: ಕಾರಿನ ಗಾಜು ಒಡೆದು ಬ್ಯಾಗ್ ಕಳವು
ಬ್ರಹ್ಮಾವರ, ನ.: ಬ್ರಹ್ಮಾವರ ಎಸ್‌ಎಂಎಸ್ ಚರ್ಚ್ ಕಂಪೌಂಡ್ ಒಳಗೆ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಬ್ಯಾಗ್ ಕಳವು ಮಾಡಿರುವ ಘಟನೆ ನ. 25ರಂದು ಬೆಳಗ್ಗೆ ನಡೆದಿದೆ.
ಬೆಂಗಳೂರಿನ ಕ್ಯಾರಲ್ ಟ್ರಿನ್ಸಿಯಾ ಡಿಸೋಜ ಎಂಬವರ ತಂದೆಯ ಕಾರಿನ ಹಿಂದಿನ ಸೀಟಿನಲ್ಲಿದ್ದ ವ್ಯಾನಿಟಿ ಬ್ಯಾಗ್‌ನ್ನು ಕಳ್ಳರು ಕಾರಿನ ಹಿಂದಿನ ಗ್ಲಾಸ್ ಒಡೆದು ಕಳವು ಮಾಡಿದ್ದಾರೆ. ಬ್ಯಾಗಿನಲ್ಲಿ 4,500ರೂ. ಹಣ, ವಾಚ್, ಡೆಬಿಟ್ ಕಾರ್ಡ್, ಪಾನ್‌ಕಾರ್ಡ್, ಡ್ರೈವಿಂಗ್ ಲೈಸೆನ್, ಫೋನ್ ಚಾರ್ಜರ್ ಇದ್ದು ಇವುಗಳ ಒಟ್ಟು ಮೌಲ್ಯ 19,500 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





