ಪೊಲೀಸರ ಮನೆಗೇ ಕನ್ನ!

ಮಂಡ್ಯ, ನ.25: ಪೊಲೀಸರ ಮನೆಯಲ್ಲೇ ಕಳವು ನಡೆದಿರುವ ಪ್ರಕರಣ ನಗರದ ಪೊಲೀಸ್ ಕಾಲನಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಮಹಿಳಾ ಪೇದೆ ಮನೆಯಲ್ಲಿ ನಗದು, ಚಿನ್ನಾಭರಣ ಕಳವು ಮಾಡಲಾಗಿದ್ದು, ಮತ್ತೊಬ್ಬ ಪೇದೆ ಮನೆಯಲ್ಲಿ ಕಳವಿಗೆ ವಿಫಲಯತ್ನ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಡಿಸಿಆರ್‍ಬಿ ವಿಭಾಗದ ಪೇದೆ ನಾಗರತ್ನ ಅವರ ಮನೆ ಬೀಗ ಮುರಿದು ಬೀರುವಿನಲ್ಲಿದ್ದ 3 ಲಕ್ಷ ರೂ. ಮತ್ತು 70 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮತ್ತೊಬ್ಬ ಪೇದೆ ರಾಜೇಶ್ ಮನೆಗೂ ನುಗ್ಗಿರುವ ಕಳ್ಳರು, ಅಕ್ಕಪಕ್ಕದವರು ಕಿರುಚಿಕೊಂಡದ್ದನ್ನು ಕೇಳಿ ಪರಾರಿಯಾಗಿದ್ದಾರೆ. ರಾಜೇಶ್ ಮನೆಗೆ ಬೀಗ ಹಾಕಿ ಸಂಬಂಧಿಕರ ಊರಿಗೆ ಹೋಗಿದ್ದರು ಎನ್ನಲಾಗಿದೆ.
ಶ್ವಾನದಳ, ಬೆರಳಚ್ಚು ತಜ್ಞರು ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಸಂಬಂಧ ನಗರದ ಕೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





