ಉಡುಪಿ: 60 ಲಕ್ಷ ರೂ. ವೆಚ್ಚದಲ್ಲಿ ಅಡ್ವೆಂಚರ್ ಫೆಸ್ಟಿವಲ್ -ಪ್ರಮೋದ್ ಮಧ್ವರಾಜ್

ಉಡುಪಿ, ನ.25: ಉಡುಪಿಯಲ್ಲಿ ಜನರಲ್ ತಿಮ್ಮಯ್ಯ ಅಡ್ವೆಂಚರ್ ಅಕಾಡೆಮಿ ವತಿಯಿಂದ 60 ಲಕ್ಷ ರೂ.ವೆಚ್ಚದಲ್ಲಿ ವಿವಿಧ ಸಾಹಸ ಕ್ರೀಡೆ ಆಯೋ ಜಿಸುವ ಕುರಿತು ಉಡುಪಿ ಅಡ್ವೆಂಚರ್ ಪೆಸ್ಟಿವಲ್ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಡುಪಿ ಪರ್ಬ ಹಾಗೂ ಉಡುಪಿ ಅಡ್ವೆಂಚರ್ ಪೆಸ್ಟಿವಲ್ ಆಯೋಜನೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಡಿ.29ರಿಂದ 31ರವರೆಗೆ ಮೂರು ದಿನಗಳ ಕಾಲ ಉಡುಪಿ ಪರ್ಬ ಹಾಗೂ ಉಡುಪಿ ಅಡ್ವೆಂಚರ್ ಪೆಸ್ಟಿವಲ್ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಜಿ ಸಲು ನಿರ್ಧರಿಸಲಾಗಿದ್ದು, ಇದರಲ್ಲಿ ಜನರಲ್ ತಿಮ್ಮಯ್ಯ ಅಡ್ವೆಂಚರ್ ಅಕಾಡೆಮಿ ವತಿಯಿಂದ ರಾಷ್ಟ್ರಮಟ್ಟದ ಸಮುದ್ರದಲ್ಲಿ ಈಜು ಸ್ಪರ್ಧೆ, ಸ್ಪೀಡ್ ವಾಲ್ ಕ್ಲೈಂಬಿಂಗ್, ಮ್ಯಾರಾಥಾನ್ ಓಟ, ಸೈಕ್ಲಿಂಗ್, ಸ್ಕೇಟ್ ಬೋರ್ಡಿಂಗ್ ಸೇರಿದಂತೆ ವಿವಿಧ ಸಾಹಸಮಯ ಕ್ರೀಡೆಗಳನ್ನು 60 ಲಕ್ಷ ರೂ. ವೆಚ್ಚದಲ್ಲಿ ಆಯೋಜಿಸಲಾಗುವುದು ಎಂದು ಪ್ರಮೋದ್ ತಿಳಿಸಿದರು.
ಉಡುಪಿ ಪರ್ಬದಲ್ಲಿ ಕರಾವಳಿ ಸಾಂಪ್ರದಾಯಿಕ ಆಹಾರ ಪರಿಚಯಿಸುವ ಸ್ಟಾಲ್‌ಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕೊನೆಯ ದಿನ ರಾತ್ರಿ ಆಕರ್ಷಕ ಸುಡುಮದ್ದು ಪ್ರದರ್ಶನ ನಡೆುಲಿದೆ ಎಂದು ಸಚಿವರು ವಿವರಿಸಿದರು.
ಉಡುಪಿ ಪರ್ಬ ಹಾಗೂ ಉಡುಪಿ ಅಡ್ವೆಂಚರ್ ಪೆಸ್ಟಿವಲ್ ಆಯೋಜಿಸುವ ಮೂಲಕ ಜಿಲ್ಲೆಯನ್ನು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಗತ್ತಿಗೆ ಇನ್ನಷ್ಟು ಪರಿಚಯಿ ಸುವ ಉದ್ದೇಶ ಹೊಂದಲಾಗಿದೆ. ಈ ಕುರಿತಂತೆ ಈಗಾಗಲೇ ವಿವಿಧ ಸಮಿತಿ ಗಳನ್ನು ರಚಿಸಿದ್ದು, ಎಲ್ಲಾ ಸಮಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಸಚಿವರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂನ ಸಿಇಒ ಶಿವಾನಂದ ಕಾಪಶಿ, ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾನಾಗ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಪ್ರವಾಸೋದ್ಯಮ ಸಂಸ್ಥೆಳ ಪ್ರತಿನಿಧಿಗಳು ಉಪಸ್ಥಿತರಿದ್ದರು.







