ಮಂಗಳೂರು: ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್ ನಿಂದ ಗ್ರಾಮ ವಾಸ್ತವ್ಯ

ಮಂಗಳೂರು, ನ. 25: ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸ್‌ನಿಂದ ಅಳಪೆಯ ಶಿವನಗರದ ಜಾನಕಿ ಆಚಾರ ಅವರ ಮನೆಯಲ್ಲಿ ಗ್ರಾಮವಾಸ್ತವ್ಯದ ಕಾರ್ಯಕ್ರಮವು ರಾಜ್ಯ ಮಹಿಳಾ ಕಾಂಗ್ರೆಸಿನ ನಿರ್ದೇಶನದಂತೆ ಜರಗಿತು.
ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರಾದ ಹರೀಶ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಮಹಿಳಾ ಕಾಂಗ್ರೆಸಿನ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಅವರು ಕಾರ್ಯಕ್ರಮದ ಸದುದ್ದೇಶವನ್ನು ವಿವರಿಸಿದರು.
ಮುಖ್ಯ ಅಥಿತಿಯಾಗಿ ಕೆಪಿಸಿಸಿ ಕಾರ್ಯದರ್ಶಿ ಮಮತಾ ಗಟ್ಟಿ, ಬ್ಲಾಕ್ ಅಧ್ಯಕ್ಷ ಜೆ.ಅಬ್ದುಲ್ ಸಲೀಂ, ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯದ ಮನೆಯ ಯಜಮಾನಿಯಾದ 80 ವರ್ಷ ಪ್ರಾಯದ ಜಾನಕಿ ಆಚಾರ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಂದಿರಾ ಗಾಂಧಿಯವರ ಸಮಯದಲ್ಲಿ ನನಗೆ ಈ ಮನೆಯನ್ನು ಸರಕಾರವು ನೀಡಿದೆ. ಈಗ ಇಂದಿರಮ್ಮನ ಜನ್ಮ ಶತಾಬ್ಧಿಯ ಸಂದರ್ಭದಲ್ಲಿ ಅವರು ನೀಡಿದ ಮನೆಯಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಗಾಮ ವಾಸ್ತವ್ಯವನ್ನು ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಶಾಸಕ ಜೆ.ಅರ್.ಲೋಬೊ ಅವರು ರಾತ್ರಿ 10 ಗಂಟೆಗೆ ಗಾಮವಾಸ್ತವ್ಯದ ಸ್ಥಳಕ್ಕೆ ಭೇಟಿ ನೀಡಿದ್ದು, ಗ್ರಾಮ ವಾಸ್ತವ್ಯವಿದ್ದ ಕಾರ್ಯಕರ್ತರೊಂದಿಗಿದ್ದರು. ಗ್ರಾಮ ವಾಸ್ತವ್ಯ ಮಾಡಿದ ಮನೆಯ ಯಜಮಾನಿ ಈ ಸಂದರ್ಭ ಜಾನಕಮ್ಮನವರ ಕಷ್ಟಗಳನ್ನು ವಿಚಾರಿಸಿದರು. ತದನಂತರ ಜಾನಕಿಯವರ ಮನೆಗೆ ಹೋಗುವ ಇಳಿಜಾರಾಗಿದ್ದ ದಾರಿಯು ಸರಿಪಡಿಸಿ ಕೊಡುವುದಾಗಿ ಭರವನೆ ನೀಡಿದರು.
ಮಹಿಳಾ ಕಾಂಗ್ರೆಸ್ ವತಿಯಿಂದ ಮನೆ ವಿದ್ಯುತ್ ದೀಪಗಳನ್ನು ಬದಲಾಯಿಸಲಾಗಿದ್ದು, ಮನೆಗೆ ಬೇಕಾದ ಸಾಮಗ್ರಿಗಳನ್ನು ನೀಡಲಾಯಿತು. ದಕ್ಷಿಣ ಬ್ಲಾಕ್ ಮಹಿಳಾ ಕಾಂಗ್ರೆಸಿನ ಅಧ್ಯಕ್ಷೆ, ಮಾಜಿ ಉಪ ಮೇಯರ್ ನಮಿತಾ ಡಿ ರಾವ್, ಮಾಜಿ ಮೇಯರ್ ಜೆಸಿಂತ ವಿಜಯ ಅಲ್ಪ್ರೆಡ್, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಕುಮಾರಿ ಅಪ್ಪಿ, ಮೂಡಾ ಸದಸ್ಯೆ ಶೋಭಾ ಕೇಶವ, ಸರಳಾ ಕರ್ಕೇರ, ವಿದ್ಯಾ ಬಾಬುಗುಡ್ಡೆ, ಗೀತಾ ಸುವರ್ಣ ಅವರು ಜಾನಕಿಯವರ ಮನೆಯಲ್ಲಿ ವಾಸ್ತವ್ಯ ಹೂಡಿದರು .ನಮಿತಾ ಡಿ ರಾವ್ ಸ್ವಾಗತಿಸಿದರು. ಶೋಭಾ ಕೇಶವ್ ವಂದಿಸಿದರು.







