ಗಾಂಜಾ ಸೇವನೆ: ಮೂವರು ಆರೋಪಿಗಳು ಸೆರೆ
ಮಂಗಳೂರು, ನ. 25: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ಶಾಲೆಯ ಎದುರಿನ ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಮೂವರು ಯುವಕರನ್ನು ಮಂಗಳೂರು ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳ ಮತ್ತು ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕುದ್ರೋಳಿಯ ಪ್ರಶಾಂತ್ (27), ಕೋಡಿಕಲ್ ನಿವಾಸಿ ದಿಲೀಪ್ ಕುಮಾರ್ (21), ಸುಂಕದಕಟ್ಟೆ ನಿವಾಸಿ ರಂಜಿತ್ ಯಾನೆ ತಮ್ಮು ಬಂಧಿತ ಆರೋಪಿಗಳು.
ಆರೋಪಿಗಳಿಂದ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Next Story





