ರಿತು ಪೋಗಟ್‌ಗೆ ಬೆಳ್ಳಿ
ಅಂಡರ್ -23 ಸೀನಿಯರ್ ವರ್ಲ್ಡ್ ಕುಸ್ತಿ ಚಾಂಪಿಯನ್‌ಶಿಪ್

ಹೊಸದಿಲ್ಲಿ, ನ.25: ಪೋಲೆಂಡ್‌ನಲ್ಲಿ ನಡೆಯುತ್ತಿರುವ ಅಂಡರ್ -23 ಹಿರಿಯರ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ರಿತು ಪೋಗಟ್ ಬೆಳ್ಳಿ ಪಡೆದಿದ್ದಾರೆ.
ಟರ್ಕಿಯ ಕುಸ್ತಿ ಪಟು ಡೆಮಿರಾನ್ ವಿರುದ್ಧ ಫೈನಲ್‌ನಲ್ಲಿ ಸೋಲು ಅನುಭವಿಸಿದ ರಿತು ಚಿನ್ನ ವಂಚಿತಗೊಂಡರು.
23ರ ಹರೆಯದ ರಿತು ಕಳೆದ ವರ್ಷ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದರು.
ಕ್ವಾರ್ಟರ್ ಫೈನಲ್‌ನಲ್ಲಿ ರಿತು ಅವರು ಬಲ್ಗೇರಿ ಯದ ಸೆಲಿಶ್ಕಾ ಅವರನ್ನು 4-2 ಅಂತರದಿಂದ ಮಣಿಸಿದರು. ಸೆಮಿಫೈನಲ್‌ನಲ್ಲಿ ರಿತು ಅವರು ಚೀನಾದ ಜಿಯಾಂಗ್ ಝು ಅವರನ್ನು 4-3 ಅಂತರ ದಲ್ಲಿ ಮಣಿಸಿ ಪ್ರಶಸ್ತಿಯ ಸುತ್ತು ತಲುಪಿದರು.
Next Story





