ಗಾಂಜಾ ಮಾರಾಟ ಮಾಡುತ್ತಿದ್ದವನ ಬಂಧನ

ತುಮಕೂರು,ನ.26:ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತಿದ್ದ ವ್ಯಕ್ತಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ತುಮಕೂರು ನಗರದ ಅಶೋಕನಗರ ವಾಸಿ ವಿಷ್ಣು ಪಿ(21) ಎಂದು ಗುರುತಿಸಲಾಗಿದೆ. ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯ ಹೆಚ್.ಎಂ.ಎಸ್.ಕಾಲೇಜು ಬಳಿ ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತಿದ್ದ ವೇಳೆ ಮಾಲು ಸಮೇತ ಸಿಕ್ಕಿಬಿದ್ದಿದ್ದಾನೆ. ಈತನಿಂದ 900 ಗ್ರಾಂ ಗಾಜಾ ಸೊಪ್ಪು ವಶಪಡಿಸಿಕೊಳ್ಳಲಾಗಿದೆ.
ಇತ್ತೀಚೆಗೆ ನಗರದಲ್ಲಿ ಗಾಂಜಾ ಸೊಪ್ಪು ಮಾರಾಟದ ಪ್ರಕರಣಗಳು ಹೆಚ್ಚುತ್ತಿದ್ದು,ಕಳೆದ ಒಂದು ತಿಂಗಳಲ್ಲಿ ಪತ್ತೆಯಾಗುತ್ತಿರುವ ನಾಲ್ಕನೇ ಗಾಂಜಾಸೊಪ್ಪು ಪ್ರಕರಣ ಇದಾಗಿದೆ ಶಾಲಾ ಕಾಲೇಜು ಬಳಿ ನಡೆಯುವ ಇಂತಹ ಕುಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.
Next Story





