ಚಿಕ್ಕಮಗಳೂರು : ನ.27ರಂದು ಕಟ್ಟಡ ಕಾರ್ಮಿಕರ ಮುಷ್ಕರ
ಚಿಕ್ಕಮಗಳೂರು, ನ.26: ಕಟ್ಟಡ ಕಾರ್ಮಿಕರ ಕುರಿತು ಸರ್ಕಾರ ಕೈಗೊಂಡಿರುವ ಕೆಲವು ನಿರ್ಧಾರಗಳನ್ನು ಪುನರ್ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿ ನ.27ರಂದು ಬಂಗಲೂರು ಕಟ್ಟಡ ಕಾರ್ಮಿಕರ ಭವನದ ಮೂಂಬಾಗದಲ್ಲಿ ಅನಿರ್ಧಿಮುಷ್ಕರವನ್ನು ನಡೆಸಲಾಗಿವುದು ಎಂದು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಜಶೇಖರ್ ತಿಳಿಸಿದರು.
ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಪ್ರತಿ ವರ್ಷ ಮಾಲಿಕರಿಂದ ಒಪ್ಪಿಗೆ ಪತ್ರ ತರಬೇಕು. ವೇತನ ಚೀಟಿ ತರಬೇಕು. ಹಾಜರಾತಿ ಪಟ್ಟಿ ಹಾಜರುಪಡಿಸಬೇಕು ಎಂಬ ನಿರ್ಣಯಗಳನ್ನು ಕೈಗೊಂಡಿರುವುದು ಕಟ್ಟಡ ಕಾರ್ಮಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬಿರಲಿದೆ ಎಂದರು.
ಈ ಸಮಯದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಚಂದ್ರು, ಕೆ.ಎಸ್.ಅಯ್ಯರ್, ಚಂದ್ರಶೇಖರ್ ಇದ್ದರು.
Next Story





