ಬಹುತ್ವದ ಸವಾಲುಗಳಿಗೆ ವಿಶ್ವಮಾನವ ಸಂದೇಶವೆ ಮಾರ್ಗಸೂಚಿ: ಪ್ರೊ.ಕಾಳೇಗೌಡ ನಾಗವಾರ
83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಮೈಸೂರು,ನ.26: ಕನ್ನಡ ಸಾಹಿತ್ಯ ಮತ್ತು ಕರ್ನಾಟಕ ಬಹುತ್ವದ ಸವಾಲುಗಳಿಗೆ ಕೊಟ್ಟತಂತಹ ಕೊಡುಗೆ ವಿಶ್ವಮಾನ ಸಂದೇಶ ಎಂದು ಪ್ರೊ.ಕಾಳೇಗೌಡ ತಿಳಿಸಿದರು.
83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆಯಲ್ಲಿ ರವಿವಾರ ಮೂರನೆ ದಿನದ ಗೋಷ್ಠಿ 'ಸಮಕಾಲೀನ ಸಂಧರ್ಭ: ಬಹುತ್ವದ ಸವಾಲುಗಳು' ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೇಖಕ ಪ್ರಧಾನ ಗುರುದತ್ತ ಅವರು ನವರಾಷ್ಟ್ರೀಯತೆ ಧಾರ್ಮಿಕ ಮೂಲಭೂತವಾದ ವಿಚಾರ ಮಂಡಿಸುತ್ತ ವಿಶ್ವದ, ಭಾರತದ ಮತ್ತು ಕರ್ನಾಟಕದ ಸಮಕಾಲೀನ ಧಾರ್ಮಿಕ ಮೂಲಭೂತವಾದ ಮತ್ತು ನವರಾಷ್ಟ್ರೀಯತೆಗಳ ರೂಪಾಂತರಗಳನ್ನು ವಿಸ್ತಾರವಾಗಿ ಕವಿಗಳ, ವಿದ್ವಾಂಸರ ಉಕ್ತಿಗಳೊಡನೆ ಪ್ರಸ್ತಾಪಿಸಿದರು.
ವೀರಣ್ಣ ದಂಡೆ ಅವರು ಅಸಹಿಷ್ಣುತೆ ವಿಷಮ ವಿಸ್ತಾರ ಕುರಿತು ಮಾತನಾಡಿ, ಎಲ್ಲ ಕಾಲದಲ್ಲೂ ಅಸಹಿಷ್ಣುತೆ ವ್ಯವಸ್ಥೆಗಳನ್ನು ಅತಂತ್ರದ ಸ್ಥಿತಿಗೆ ತಂದು ನಿಲ್ಲಿಸುತ್ತಿದ್ದು, ಆತ್ಮಹತ್ಯೆ ಮತ್ತು ಹತ್ಯೆಗಳ ವಿಷಮ ವಾತಾವರಣ ಸೃಷ್ಟಿಸುತ್ತಿದೆ ಎಚಿದು ತಿಳಿಸಿದರು.
ಚಿಂತಕಿ ವಿನಯಾ ಒಕ್ಕುಂದ ಅವರು ದಿನನಿತ್ಯ ನಡೆಯುತ್ತಿರುವ ಘಟನೆಗಳನ್ನು ಉದಾಹರಿಸುತ್ತ ಒಟ್ಟಾರೆಯಾಗಿ ಸೃಜನಶೀಲ ವರ್ಗ ಬೆದುರಿಸುತ್ತಿರುವ ಸಂವಿಧಾನ ದತ್ತ ಅಭಿವ್ಯಕ್ತಿ ಸ್ವಾತಂತ್ಯದ ಬಿಕ್ಕಟ್ಟುಗಳ ಪೂರ್ಣ ಚಿತ್ರಣ ಕಟ್ಟಿಕೊಟ್ಟರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪ್ರೊ.ಕಾಳೇಗೌಡ ನಾಗವಾರ ಅವರು ಕನ್ನಡ ಸಾಹಿತ್ಯ ಸಮಕಾಲೀನ ಸಂಧರ್ಭ: ಬಹುತ್ವದ ಸವಾಲುಗಳಿಗೆ ಉತ್ತರವಾಗಿ ವಿಶ್ವಮಾನವ ಸಂದೇಶವನ್ನು ನೀಡಿ ಪರಿಹಾರದ ದಾರಿಯನ್ನು ಗುರುತುಮಾಡಿದೆ ಎಂದರು. ಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷರಾದ ಪ್ರೊ.ಚಂದ್ರಶೇಖರ ಪಾಟೀಲ ಅವರು ಉಪಸ್ಥಿತರಿದ್ದರು.







