ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರರ ಸಭೆ

ಮಂಗಳೂರು, ನ.26: ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ. ಹರೀಶ್ ಕುಮಾರ್‌ರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರರ ಸಭೆಯು ಶನಿವಾರ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಯಿತು.
ಮುಂಬರುವ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಲುವಾಗಿ ಜಿಲ್ಲಾದ್ಯಂತ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ದೃಷ್ಟಿಯಿಂದ ಹಾಗೂ ಸರಕಾರದ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಸಮರ್ಥವಾಗಿ ತಿರುಗೇಟು ನೀಡುವ ಉದ್ದೇಶದಿಂದ ನೇಮಕಗೊಂಡಿರುವ ವಕ್ತಾರರಿಗೆ ವಿವಿಧ ಜವಾಬ್ದಾರಿ ವಹಿಸಿಕೊಡಲಾಯಿತು.
ಸಭೆಯಲ್ಲಿ ವಕ್ತಾರರಾದ ಎಂ.ಎಸ್.ಮುಹಮ್ಮದ್, ಮಮತಾ ಗಟ್ಟಿ, ವೆಂಕಪ್ಪಗೌಡ, ಭರತ್ ಮುಂಡೊಡಿ, ದೀಪಕ್ ಪೂಜಾರಿ, ಬಿ.ಎ.ಮುಹಮ್ಮದ್ ಹನೀಫ್, ಡಿ.ಕೆ. ಅಶೋಕ್ ಕುಮಾರ್, ಶಾಹುಲ್ ಹಮೀದ್, ಮಹಾಬಲ ಮಾರ್ಲ, ಎ.ಸಿ.ವಿನಯರಾಜ್, ಪ್ರತಿಭಾ ಕುಳಾಯಿ, ಗಣೇಶ್ ಪೂಜಾರಿ, ಯು.ಎಚ್. ಖಾಲಿದ್, ಶಶಿರಾಜ್ ಅಂಬಟ್, ದಿವ್ಯಾ ಪ್ರಭಾ ಚಿಲ್ತಡ್ಕ, ಸಂತೊಷ್ ಕುಮಾರ್ ಶೆಟ್ಟಿ, ನಝೀರ್ ಬಜಾಲ್ ಉಪಸ್ಥಿತರಿದ್ದರು.
Next Story





