ನ.27: ಅಳಿಕೆ ಸಹಾಯ ನಿಧಿ ವಿತರಣೆ
ಮಂಗಳೂರು, ನ. 26:ಯಕ್ಷಗಾನ ರಂಗದ ಪ್ರಸಿದ್ಧ ವೇಷಧಾರಿ, ತೆಂಕುತಿಟ್ಟಿನ ಮೇರು ಕಲಾವಿದ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ದಿ. ಅಳಿಕೆ ರಾಮಯ್ಯ ರೈ ಅವರ ಸ್ಮರಣಾರ್ಥ ನೀಡಲಾಗುವ ‘ಅಳಿಕೆ ಯಕ್ಷ ಸಹಾಯ ನಿಧಿ’ ಹಾಗೂ ’ಅಳಿಕೆ ಪ್ರಶಸ್ತಿ’ಗೆ ಹಿರಿಯ ಯಕ್ಷಗಾನ ಕಲಾದ ಪುತ್ತೂರಿನ ಕೆ.ಎಚ್. ದಾಸಪ್ಪರೈ ಮತ್ತು ಬಾಯಾರು ಆನಂದ ಪುರುಷ ಆಯ್ಕೆಯಾಗಿರುತ್ತಾರೆ.
ಪ್ರಶಸ್ತಿಯನ್ನು ನ.27ರಂದು ಗೃಹ ಸನ್ಮಾನದೊಂದಿಗೆ ತಲಾ 10,000 ರೂ.ನಿಧಿಯೊಂದಿಗೆ ನೀಡಲಾಗುವುದು ಎಂದು ಟ್ರಸ್ಟ್ ಪ್ರಕಟನೆಯಲ್ಲಿ ತಿಳಿಸಿದೆ.
Next Story





