ವ್ಯವಸ್ಥಿತ ಒಳಚರಂಡಿ ನಿರ್ಮಾಣಕ್ಕೆ ಸಿಪಿಐ ಒತ್ತಾಯ
ಮಂಗಳೂರು, ನ. 26: ನಗರ ತ್ವರಿತ ಗತಿಯಲ್ಲಿ ಬೆಳೆಯುತ್ತಿದ್ದರೂ ಒಳಚರಂಡಿ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಸಣ್ಣ ಮಳೆ ಸುರಿದರೂ ನೀರು ರಸ್ತೆಯಲ್ಲೇ ಹರಿದು ಕಟ್ಟಡಗಳಿಗೆ ನುಗ್ಗುತ್ತಿವೆ. ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರು ಒಳಚರಂಡಿ ನಿರ್ಮಿಸಿದರೂ ಒಂದಕ್ಕೊಂದು ಸಂಪರ್ಕ ನೀಡದೆ ತನ್ನ ಕಾಮಗಾರಿಯ ವ್ಯಾಪ್ತಿಗಷ್ಟೇ ನಿರ್ಮಿಸುತ್ತಾರೆ. ಇದರಿಂದ ಒಳರಚರಂಡಿ ಮಾಡಿಯೂ ಪ್ರಯೋಜನ ಇಲ್ಲದಂತಾಗಿದೆ. ಹಾಗಾಗಿ ಮನಪಾ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಜರಗಿಸಬೇಕು ಸಿಪಿಐ ದೇರೇಬೈಲ್ ಶಾಖಾ ಸಭೆ ಒತ್ತಾಯಿಸಿದೆ.
ಪಕ್ಷದ ಹಿರಿಯ ನಾಯಕಿ ಸೀತಾ ಕೊಟ್ಟಾರ ಸಭೆ ಉದ್ಘಾಟಿಸಿದರು. ಕಾ.ಡಿ. ಭುಜಂಗ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ತಾಲೂಕು ಸಹಾಯಕ ಕಾರ್ಯದರ್ಶಿ ತಿಮ್ಮಪ್ಪಕಾವೂರು, ಕಲ್ಯಾಣಿ ಕೊಟ್ಟಾರ, ರವಿಕಲಾ, ಜಾನಕಿ, ವೇದಾ, ಪುಷ್ಪಾ, ಜಯಂತಿ ಉಪಸ್ಥಿತರಿದ್ದರು.
Next Story





