ಚೀನಾದಲ್ಲಿ: ಭಾರೀ ಸ್ಫೋಟ; ಕನಿಷ್ಠ 2 ಬಲಿ

ಬೀಜಿಂಗ್,ನ.26: ಚೀನಾದ ಬೃಹತ್ ಬಂದರು ನಗರ ನಿಂಗ್‌ಬೊದಲ್ಲಿ ರವಿವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸ್ಫೋಟ ಸಂಭವಿಸಿದ ಪ್ರದೇಶದಲ್ಲಿದ್ದ ಹಲವಾರು ಕಟ್ಟಡಗಳು ಹಾಗೂ ಕಾರುಗಳು ನಾಶವಾಗಿದ್ದು, ಸ್ಮಶಾನ ಸದೃಶ ವಾತಾವರಣ ನಿರ್ಮಾಣವಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಖಾಲಿಬಿದ್ದಿದ್ದ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆಯೆಂದು ನಿಂಗ್‌ಬೊ ದ ಸ್ಥಳೀಯಾಡಳಿತ ತಿಳಿಸಿದೆ. ಆದರೆ ಸ್ಫೋಟಕ್ಕೆ ಕಾರಣವೇನೆಂಬ ಬಗ್ಗೆ ಯಾವುದೇ ವಿವರಗಳನ್ನು ಅದು ನೀಡಿಲ್ಲ.
ಈ ಮಧ್ಯೆ ಚೀನಾದ ಅಧಿಕೃತ ಸುದ್ದಿ ಕ್ಸಿನುವಾ, ನಿಂಗ್‌ಬೊ ನಗರದ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿರುವುದಾಗಿ ವರದಿ ಮಾಡಿತ್ತು. ಘಟನೆಯಲ್ಲಿ 30 ಮಂದಿ ಗಾಯಗೊಂಡಿರುವುದಾಗಿ ಟಿವಿ ವಾಹಿನಿಯೊಂದು ವರದಿ ಮಾಡಿತ್ತು.
ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಕಾಂಕ್ರೀಟ್, ಮರ ಹಾಗೂ ಗಾಜಿನ ಚೂರುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
Next Story





