ರಾಜಕೀಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವೆ : ಗೀತಾ ಶಿವರಾಜ್ ಕುಮಾರ್

ಸೊರಬ,ನ.26: ಕುಟುಂಬದ ಹೊಣೆಗಾರಿಕೆ ಜೊತೆಗೆ ರಾಜಕೀಯ ಚಟುವಟಿಕೆಗಳಲ್ಲಿಯೂ ಸಕ್ರೀಯವಾಗಿ ತೊಡಗಿಸಿಕೊಳ್ಳುವೆ ಎಂದು ಗೀತಾ ಶಿವರಾಜ್ ಕುಮಾರ್ ತಿಳಿಸಿದರು.ಪಟ್ಟಣದ ಬಂಗಾರ ಧಾಮದಲ್ಲಿರುವ ಮಾಜಿ ಮುಖ್ಯ ಮಂತ್ರಿ ಎಸ್.ಬಂಗಾರಪ್ಪನವರ ಸಮಾಧಿಗೆ ರವಿವಾರ ಪತಿ ನಟ ಶಿವರಾಜ್ ಕುಮಾರ್‍ರೊಂದಿಗೆ ಆಗಮಿಸಿ ಸಮಾಧಿಗೆ ನಮನ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ತಂದೆ ಬಂಗಾರಪ್ಪ ಅವರು ಬಡವರ ಪರವಾಗಿ ಸಾರ್ವಜನಿಕ ಜೀವನದಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಯುವ ಸಮುದಾಯಕ್ಕೆ ಅಂತಹ ಮಹಾನ್ ನಾಯಕರ ನಾಯಕತ್ವವನ್ನು ತಿಳಿಸುವ ಅಗತ್ಯವಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ರಾಜಕಾರಣದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ಕೆ.ಅಜ್ಜಪ್ಪ, ಎಪಿಎಂಸಿ ಅಧ್ಯಕ್ಷ ರಾಜಶೇಖರ್ ಕುಪ್ಪಗಡ್ಡೆ, ಸದಸ್ಯರಾದ ಪ್ರಕಾಶ್ ಹಳೇಸೊರಬ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಬೀಬೀ ಝುಲೇಖಾ, ಸದಸ್ಯರಾದ ಪ್ರಶಾಂತ ಮೇಸ್ತ್ರಿ, ಮಂಚಿ ಹನುಮಂತಪ್ಪ, ಪ್ರಮುಖರಾದ ಪರಶುರಾಮ್, ಮಂಚಿ ಸೋಮಪ್ಪ, ಡಾಕಪ್ಪ, ಫಯಾಜ್ ಅಹಮದ್ ಮತ್ತಿತರು ಇದ್ದರು.





