ಕರಡಿಗೋಡು ಸರಕಾರಿ ಶಾಲೆಯ ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ

ಸಿದ್ದಾಪುರ,ನ.26 : ಸಮೀಪದ ಕರಡಿಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವದ ಕಾರ್ಯಕ್ರಮಕ್ಕೆ ಏರ್ ಕಮೋಡರ್ ಕಂಬಿರಂಡ ದೇವಯ್ಯ ದೀಪ ಬೆಳಗಿಸಿ ಚಾಲನೆ ನೀಡಿದರು
ಈ ಸಂದರ್ಭ ಪಾಲಿಬೇಟ್ಟ ಸಮೂಹ ಸಂಪನ್ಮೂಲ ವ್ಯಕ್ತಿ ಕರುಂಬಯ್ಯ ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡಿ ಗ್ರಾಮಸ್ಥರ ಸರಕಾರದೊಂದಿಗೆ ಸರಕಾರಿ ಶಾಲೆಯು 1957ರಲ್ಲಿ ದಿವಂಗತ ಕುಕ್ಕನೂರು ಕಾರ್ಯಪ್ಪ ದಾನ ನೀಡಿದ 1 ಎಕರೆ ಜಾಗದಲ್ಲಿ ಹುಲ್ಲಿನ ಗುಡಿಸಲಿನಲ್ಲಿ ಪ್ರಾರಂಭವಾದ ಶಾಲೆಯು, ನಂತರ ದಿ. ಟಿ.ಎಂ ಮಾದಪ್ಪ ಅವರ ಪರಿಶ್ರಮದಿಂದ ಕಟ್ಟಡಕ್ಕೆ ವರ್ಗಾವಣೆಗೊಂಡಿತು. 30 ವಿದ್ಯಾರ್ಥಿಗಳೊಂದಿಗೆ 1ನೇ ತರಗತಿಯಿಂದ ಪ್ರಾರಂಭಗೊಂಡ ಶಾಲೆಯು ಹಂತ-ಹಂತವಾಗಿ ತರಗತಿಗಳನ್ನು ಹೆಚ್ಚಿಸುತ್ತಾ 4ನೇ ತರಗತಿಯವರೆಗಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಕಾರ್ಯ ನಿರ್ವಹಿಸುತ್ತಿತ್ತು.
2007ರಲ್ಲಿ ಏಳನೇ ತರಗತಿವರೆಗೆ ಅನುಮತಿ ದೊರೆತು ಹಿರಿಯ ಪ್ರಾಥಮಿಕ ಶಾಲೆಯಾಯಿತು. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿದ ಈ ಶಾಲೆಯು ಪ್ರಸಕ್ತ 68 ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ನೀಡಿ ವಿಧ್ಯಾರ್ಥಿಗಳ ಮುಂದಿನ ಭವಿಷ್ಯ ರೊಪಿಸಲು ಶಿಕ್ಷಕರುಗಳ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು
ಇವಾಲ್ವ್ ಬ್ಯಾಕ್ ರೆಸಾರ್ಟ್ ಸಂಸ್ಥೆಯ ಕಾಂತಿ ಅನೀಶ್ ಮಾತನಾಡಿ ಕರಡಿಗೊಡು ಸರಕಾರಿ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳೆ ಹೆಚ್ಚಾಗಿದ್ದು. ಇವಾಲ್ವ್ ಬ್ಯಾಕ್ ರೆಸಾರ್ಟ್ ಸಂಸ್ಥೆಯಿಂದ ಶಾಲೆಯನ್ನು 2009ರಲ್ಲಿ ದತ್ತು ಪಡೆದ ಬಳಿಕ ಶಾಲೆಯ ಶಿಕ್ಷಣ ವ್ಯವಸ್ಥೆಯಲ್ಲಿಯೇ ಬದಲಾವಣೆಯಾಗಿದೆ. ಸಂಸ್ಥೆಯು ಕಂಪ್ಯೂಟರ್ ಮತ್ತು ಇಂಗ್ಲಿಷ್ ಕಲಿಕೆಗಾಗಿ ಇಬ್ಬರು ಶಿಕ್ಷಕರನ್ನು ನೇಮಿಸಿ ಅವರಿಗೆ ವೇತನ ನೀಡುತ್ತಿದೆ.
ಶಾಲೆಗೆ ಬೇಕಾದ ಗ್ರಂಥಾಲಯ, ಕಂಪ್ಯೂಟರ್, ಕೊಠಡಿ, ತಡೆಗೋಡೆ, ಮುಖ್ಯದ್ವಾರ ಮುಂತಾದವುಗಳನ್ನು ಕೂಡಾ ಕೊಡೆಗೆಯಾಗಿ ನೀಡಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಮವಸ್ತ್ರ, ಶೂಸ್ ಮತ್ತು ಪುಸ್ತಕಗಳನ್ನು ಉಚಿತವಾಗಿ ನೀಡಿ ವಾರದಲ್ಲಿ ಒಂದು ದಿನ ಪೌಷ್ಠಿಕ ಆಹಾರ ಕೂಡಾ ಸಂಸ್ಥೆ ಒದಗಿಸುತ್ತಿದೆ ಮುಂದಿನ ದಿನಗಳಲ್ಲಿ ಸಂಸ್ಥೆ ವತಿಯಿಂದ ಮತ್ತಷ್ಟು ಸಹಕಾರ ನೀಡಲಾಗುವುದು ಎಂದು ಹೇಳಿದರು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ವಿ.ಕೆ ಲೋಕೇಶ್ ಮಾತನಾಡಿ ಸರಕಾರಗಳು ಸರಕಾರಿ ಶಾಲೆಗಳಿಗೆ ಹೆಚ್ಚು ಸೌಲಬ್ಯ ನೀಡುತ್ತಿದ್ದು. ಖಾಸಗಿ ಶಾಲೆಯಂತೆಯೇ ಸಕಲ ಸೌಲಭ್ಯ ಹೊಂದಿರುವ ಶಾಲೆಗೆ ಸರ್ಕಾರದ ಅನುದಾನಗಳು ಕೂಡಾ ಸಮರ್ಪಕವಾಗಿ ಲಬ್ಯವಾಗುತ್ತಿದ್ದು, ಇಲ್ಲಿನ ಮಕ್ಕಳು ಕೂಡಾ ಅದರ ಸದುಪಯೋಗ ಪಡೆದುಕೊಂಡು ಸಮಾಜದಲ್ಲಿ ಶಿಕ್ಷಣದ ಮೂಲಕ ಮುಖ್ಯ ವಾಹಿನಿಗೆ ಬರಬೇಕೆಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಎಂ ಕೆ ಮಣಿ ಮಾತನಾಡಿ ಸರಕಾರಿ ಶಾಲೆಗಳಿಗೆ ಗ್ರಾಮ ಪಂಚಾಯತಿ ವತಿಯಿಂದ ನಾನಾ ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೆಂಕೆದರು ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಡಿ ನಾಣಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ ಶಿಕ್ಷಕ ಅಯ್ಯಣ್ಣ, ಬೆಳಗಾರ ಕೆ.ಕೆ ಗಣಪತಿ,ಮೊಹನ್,ಗ್ರಾಮ ಪಂಚಾಯತ್ ಸದಸ್ಯರಾದ ಕರ್ಪಯ್ಯ,ಪೂವಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ : ಮಕ್ಕಳ ಪೋಷಕರು ಮತ್ತು ಗ್ರಾಮಸ್ಥರಿಗಾಗಿ ಹಗ್ಗ ಜಗ್ಗಾಟ,ಬಾರದ ಗುಂಡು ಏಸತ,ಕಬಡ್ಡಿ ಸೇರಿದಂತೆ ನಾನಾ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು







