ನೇಪಾಳದಲ್ಲಿ ಶಾಂತಿಯುತ ಮತದಾನ

ಕಠ್ಮಂಡು,ನ.26: 2015ರಲ್ಲಿ ನೂತನ ಸಂವಿಧಾನ ಘೋಷಣೆಯಾದ ಬಳಿಕ ಪ್ರಪ್ರಥಮ ಬಾರಿಗೆ ನೇಪಾಳದ ಫೆಡರಲ್ ಹಾಗೂ ಪ್ರಾಂತೀಯ ಅಸೆಂಬ್ಲಿಗೆ ರವಿವಾರ ಚುನಾವಣೆ ನಡೆದಿದ್ದು, ಶೇ.65ಕ್ಕೂ ಅಧಿಕ ಮಂದಿ ಮತದಾನ ಮಾಡಿದ್ದಾರೆ.
ಮತದಾನವು ಬಹುತೇಕ ಶಾಂತಿಯುತವಾಗಿತ್ತೆಂದು ಮುಖ್ಯ ಚುನಾವಣಾ ಆಯುಕ್ತ ಆಯೋಧಿ ಪ್ರಸಾದ್ ಯಾದವ್ ತಿಳಿಸಿದ್ದಾರೆ.
ನೇಪಾಳದ 32 ಜಿಲ್ಲೆಗಳಲ್ಲಿ ಇಂದು ಮತದಾನ ನಡೆದಿದೆ. ಉಳಿದ 42 ಜಿಲ್ಲೆಗಳಲ್ಲಿ ಡಿಸೆಂಬರ್ 7ರಂದು ಚುನಾವಣೆ ನಡೆಯಲಿದೆ.
ಬಹುತೇಕ ಕ್ಷೇತ್ರಗಳಲ್ಲಿ ನೇಪಾಳ ಕಾಂಗ್ರೆಸ್ ಹಾಗೂ ಸಿಪಿಎನ್-ಯುಎಂಎಲ್ ಮತ್ತು ಸಿಪಿಎನ್ (ಮಾವೊಯಿಸ್ಟ್ ಸೆಂಟರ್) ಮೈತ್ರಿಕೂಟದ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ.
Next Story





