ಮಂಡ್ಯ: ಕಾರಿನ ಗಾಜು ಒಡೆದು ಕಳವು
ಮಂಡ್ಯ,ನ.26: ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಸಮೀಪ ಕಾವೇರಿ ನದಿ ತೀರದ ದೇವಸ್ಥಾನದ ಬಳಿ ನಿಲ್ಲಿಸಿದ್ದ ಕಾರಿನ ಬಾಗಿಲ ಗಾಜು ಒಡೆದು 2.30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ.
ಬೆಂಗಳೂರಿನ ಜಯನಗರ ನಿವಾಸಿ ಪ್ರದೀಪ್ ಹಾಗೂ ಅವರ ಸ್ನೇಹಿತೆ 68 ಗ್ರಾಂ ಚಿನ್ನಾಭರಣ, ಲ್ಯಾಪ್‍ಟ್ಯಾಪ್ ಹಾಗೂ ಎಟಿಎಂ, ಇತರ ದಾಖಲಾತಿಗಳ ಬ್ಯಾಗನ್ನು ಕಾರಿನಲ್ಲಿರಿಸಿ ಸಮೀಪದ ಕಾವೇರಿ ನದಿ ನೀರಿನಲ್ಲಿ ಆಟವಾಡುತ್ತಿದ್ದಾಗ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ.
Next Story





