ಕಾರ್ಪೋರೇಟ್ ಕ್ರಿಕೆಟ್ ಬ್ಯಾಶ್: ನಿರ್ಮಾಣ್ ತಂಡ ಸೆಮಿ ಫೈನಲಿಗೆ,

ಮಂಗಳೂರು, ನ. 26: ಬ್ಯಾಂಡ್ರ್ ವಿಷನ್ ಇವೆಂಟ್ ಸಂಸ್ಥೆಯು ಸಹ್ಯಾದ್ರಿ ಸಂಸ್ಥೆಯ ಸಹಕಾರದೊಂದಿಗೆ ಅಡ್ಯಾರ್‌ನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹುಲ್ಲುಹಾಸಿನ ಕ್ರೀಡಾಂಗಣದಲ್ಲಿ ಕರಾವಳಿಯ 24 ವಿವಿಧ ಕಂಪನಿಗಳ ನಡುವೆ ಜರಗುತ್ತಿರುವ ಎಕೆ ಕಾರ್ಪೋರೇಟ್ ಲೀಗ್ ಕ್ರಿಕೆಟ್ ಪಂದ್ಯಾಟದ ನಾಲ್ಕನೆ ದಿನ ಜರಗಿದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಕ್ಸಿಸ್ ಬ್ಯಾಂಕ್ ತಂಡ ನೀಡಿದ 83 ರನ್‌ಗಳ ವಿಜಯದ ಗುರಿಯತ್ತ ಓಟವಿತ್ತ ಫೋರಂ ಮಾಲ್ ತಂಡವು ಆರಂಭದ ಹಂತದಲ್ಲಿ ಮುಗ್ಗರಿಸಿ ಸೋಲಿನತ್ತ ಸಾಗಿದಂತೆ ಕಂಡಿತಾದರೂ ನಂತರ ಪ್ರಸನ್ನ ಮತ್ತು ಕಿರಣ್‌ರವರ ಜವಾಬ್ದಾರಿಯುತ ಆಟದಿಂದಾಗಿ 2 ವಿಕೇಟ್ ಗಳ ವಿಜಯವನ್ನು ದಾಖಲಿಸಿತು.
ಮಣಿಪಾಲ ಟೆಕ್ನಾಲಜಿ ತಂಡವು ಹೊನಲು ಬೆಳಕಿನಲ್ಲಿ ಜರಗಿದ ಪಂದ್ಯದಲ್ಲಿ ಸೂರಜ್ ರವರ ಎರಡು ಸಿಕ್ಸರ್, ಎರಡು ಬೌಂಡರಿಗಳನ್ನೊಳಗೊಂಡ 33 ರನ್‌ಗಳ ಸಹಾಯದಿಂದ ಆರ್ ಪಿ ಜಿ ತಂಡಕ್ಕೆ 71 ರನ್‌ಗಳ ಗೆಲುವಿನ ಗುರಿಯನ್ನು ನೀಡಿತು. ಮಣಿಪಾಲ ತಂಡ ಉತ್ತಮ ಬೌಲಿಂಗ್ ಮತ್ತು ಕ್ಷೇತ್ರ ರಕ್ಷಣೆಯೆದುರು 21 ರನ್‌ಗಳಿಗೆ ಆರಂಭದ ನಾಲ್ಕು ವಿಕೇಟುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಉಳಿದ ಆಟಗಾರರು ಈ ಸಂಕಷ್ಟದಿಂದ ಪಾರು ಮಾಡುವ ಯತ್ನ ಮಾಡಿದರಾದರೂ ಮಣಿಪಾಲ ತಂಡದ ಆಟಗಾರರು ಆ ಯತ್ನಕ್ಕೆ ತಣ್ಣೀರೆರಚಿ ತಂಡದ ಮೊತ್ತವನ್ನು 50 ಕ್ಕೆ 9 ರಲ್ಲಿ ನಿಲ್ಲಿಸಿ 20 ರನ್‌ಗಳ ಜಯದೊಂದಿ ಮಣಿಪಾಲ್ ಟೆಕ್ ತಂಡವುೆ ಕ್ವಾರ್ಟರ್ ಫೈನಲಿಗೆ ಲಗ್ಗೆ ಇಟ್ಟಿತು. ಸೂರಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಕ್ವಾರ್ಟರ್ ಫೈನಲಿನಲ್ಲಿ ಮಣಿಪಾಲ್ ಟೆಕ್ ತಂಡವು ಎದುರಾಳಿ ಮೂಡಬಿದರೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡವನ್ನು ಕೇವಲ 39 ರನ್‌ಗಳಿಗೆ ಅಲೌಟ್ ಮಾಡಿ ನಾಗಾರ್ಜುನರವರ 24 ರನ್‌ಗಳ ಸಹಾಯದಿಂದ ಕೇವಲ 3.2 ಓವರುಗಳಲ್ಲಿ ವಿಜಯದ ಗುರಿಯನ್ನು ತಲಪಿ ಸೆಮಿಫೈನಲಿಗೆ ಹೆಜ್ಜೆ ಇಟ್ಟಿತು.
ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಂಸಿಫ್ ತಂಡವನ್ನು 20 ರನ್‌ಗಳ ಅಂತರದಿಂದ ಸೋಲಿಸಿದ ಗಣೇಶ್ ಶಿಪ್ಪಿಂಗ್ ತಂಡವು ಸೆಮಿಫೈನಲ್ ಪ್ರವೇಶವನ್ನು ಕಂಡಿತು.
ಟೀಂ ಮಣಿಪಾಲ ತಂಡವು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿರ್ಮಾಣ ಹೋಮ್ ತಂಡಕ್ಕೆ ನೀಡಿದ 80 ರನ್‌ಗಳ ಗುರಿಯನ್ನು ತಲಪುವಲ್ಲಿ ನಿರ್ಮಾಣ್ ತಂಡದ ಅಕ್ಷಯ್‌ರವರು 29 ರನ್‌ಗಳ ಉತ್ತಮ ಬ್ಯಾಟಿಂಗ್‌ನೊಂದಿಗೆ ತಂಡಕ್ಕೆ ಸೆಮಿ ಫೈನಲ್ ಪ್ರವೇಶ ದೊರಕುವಂತೆ ಮಾಡಿದರು.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನಿರ್ಮಾಣ ಹೋಮ್ ತಂಡವು ನೀಡಿದ 91 ರನ್‌ಗಳ ವಿಜಯದ ಗುರಿಯನ್ನು ಬೆನ್ನತ್ತುವ ಹಾದಿಯಲ್ಲಿ ಒಂದರ ಹಿಂದೆ ಒಂದು ವಿಕೇಟುಗಳನ್ನು ಕಳೆದುಕೊಂಡ ಫೋರಂ ಮಾಲ್ ತಂಡವು ಕೇವಲ 51 ರನ್‌ಗಳಿಗೆ ಆಲೌಟ್ ಆಗುವ ಮೂಲಕ 40 ರನ್‌ಗಳ ಅಂತರದ ಸೋಲನ್ನು ಕಂಡಿತು. ಐ ಪಿ ಎಲ್ ಆಟಗಾರ ಕೆ.ಸಿ. ಕಾರಿಯಪ್ಪರವರು ಆಟಗಾರರನ್ನು ಪರಿಚಯಿಸಿಕೊಂಡು ಅಭಿನಂದಿಸಿದರು.







