ಪೇಜಾವರ ಶ್ರೀ ಮೇಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಆಟೊ ಚಾಲಕರ ಸಂಘದಿಂದ ಧರಣಿ
ಚಿಕ್ಕಮಗಳೂರು, ನ.27: ಉಡುಪಿಯಲ್ಲಿ ನಡೆದ ಧರ್ಮ ಸಂಸದ್‍ನಲ್ಲಿ ಭಾರತೀಯ ಸಂವಿಧಾನ ಬದಲಾಯಿಸಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿರುವ ಉಡುಪಿ ಪೇಜಾವರ ಶ್ರೀಗಳ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ನಗರದ ಡಾ. ಬಿ.ಆರ್.ಅಂಬೇಡ್ಕರ್ ಆಟೊ ಮಾಲಕರು ಮತ್ತು ಚಾಲಕರ ಸಂಘದ ಕಾರ್ಯಕರ್ತರು ಧರಣಿ ಡೆಸಿದರು.
ಕಾರ್ಯಕರ್ತರು ಸೋಮವಾರ ತಾಲೂಕು ಕಚೇರಿ ಆವರಣದಿಂದ ಆಝಾದ್ ಪಾರ್ಕ್‍ವರೆಗೆ ಮೆರವಣಿಗೆ ನಡೆಸಿ ಬಳಿಕ ಪೇಜಾವರ ಶ್ರೀಗಳ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿವಿಧ ದಲಿತ ಮುಖಂಡರುಗಳಾದ ಕೆ.ಟಿ.ರಾದಾಕೃಷ್ಣ, ಹಿರೇಮಗಳೂರು ರಾಮಚಂದ್ರ, ಮರ್ಲೆ ಅಣ್ಣಯ್ಯ ಹಾಗೂ ರೈತ ಮುಖಂಡ ಆರ್.ಆರ್.ಮಹೇಶ್ ಸಿ.ಎಂ.ಮಲ್ಲಿಕಾರ್ಜುನ್, ಪುರುಷೋತ್ತಮ್, ಗಣೇಶ್, ಬಾಲರಾಜ್, ನಿಂಗರಾಜ್, ಹೊನ್ನಪ್ಪ ನೇತೃತ್ವ ವಹಿಸಿದ್ದರು.
Next Story





