ಬೆಂಗಳೂರು: ನ.28ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ
ಬೆಂಗಳೂರು, ನ.27: ಬೆಂಗಳೂರು ಜಲಮಂಡಳಿಯು ಕೆಪಿಟಿಸಿಎಲ್ ಸಹಯೋಗದೊಂದಿಗೆ ಎಚ್‌ಟಿ ಮೀಟರ್ ಅನ್ನು ಬದಲಾಯಿಸುವ ಕಾಮಗಾರಿಯನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಕಾವೇರಿ ನೀರು ಸರಬರಾಜು ಯೋಜನೆಯ 1,2,3 ಹಾಗೂ 4ನೆ ಹಂತದ 1ನೆ ಮತ್ತು 2ನೆ ಘಟ್ಟದ ಪಂಪ್‌ಹೌಸ್‌ನಲ್ಲಿರುವ ಪಂಪಿಂಗ್ ಸಿಸ್ಟಮ್‌ಗಳ ಕಾರ್ಯಾಚರಣೆಯನ್ನು ನ.28ರಂದು ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ ಸ್ಥಗಿತಗೊಳಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಾದ್ಯಂತ ಅಂದು ಈ ಅವಧಿಯಲ್ಲಿ ನೀರು ಪೂರೈಕೆಯಲ್ಲಿ ಭಾಗಶಃ ವ್ಯತ್ಯಯವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





