ಆಧಾರ್ ಕಡ್ಡಾಯ: ದಿಲ್ಲಿ-ಕೇಂದ್ರ ವಿವಾದದ ವಿಚಾರಣೆ ಪೂರ್ಣಗೊಂಡ ಬಳಿಕ ಆಲಿಕೆ; ಸುಪ್ರೀಂ ಕೋರ್ಟ್

ಹೊಸದಿಲ್ಲಿ, ನ. 27: ನಾಗರಿಕರು ವಿವಿಧ ಸೇವೆ ಪಡೆಯಲು ಆಧಾರ್ ಜೋಡಣೆ ಕಡ್ಡಾಯ ಪ್ರಶ್ನಿಸಿ ಸಲ್ಲಿಸಲಾದ ದೂರುಗಳ ಗುಚ್ಚ ತನ್ನ ಸಾಂವಿಧಾನಿಕ ಪೀಠದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ದಿಲ್ಲಿ-ಕೇಂದ್ರದ ವಿವಾದದ ವಿಚಾರಣೆ ಪೂರ್ಣಗೊಂಡ ಬಳಿಕ ಆಲಿಕೆ ನಡೆಸಲಾಗು ವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಈ ನಡುವೆ ವಿವಿಧ ಯೋಜನೆಗಳಿಗೆ ಆಧಾರ್ ಜೋಡಣೆ ಕಡ್ಡಾಯದ ಅಂತಿಮ ದಿನಾಂಕವನ್ನು ಮುಂದಿನ ವರ್ಷ ಮಾರ್ಚ್ 31ಕ್ಕೆ ಮುಂದೂಡಲಾಗಿದೆ ಎಂದು ಕೇಂದ್ರ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಕೂಡ ಒಳಗೊಂಡ ಪೀಠ, ಈ ವಿಷಯದ ಕುರಿತಂತೆ ಸಾಂವಿಧಾನಿಕ ಪೀಠ ಮಾತ್ರ ಮಧ್ಯಂತರ ಆದೇಶ ಜಾರಿ ಮಾಡಬಹುದಾಗಿದೆ ಎಂದಿದೆ.
ಕಲ್ಯಾಣ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿರುವ ಸರಕಾರದ ನಿರ್ಧಾರಕ್ಕೆ ಮಧ್ಯಂತರ ತಡೆ ಆದೇಶ ನೀಡುವಂತೆ ಕೋರಿ ಸಲ್ಲಿಸಲಾದ ಮನವಿ ಹಿನ್ನೆಲೆಯಲ್ಲಿ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
Next Story





