Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ರಂಗಪ್ರವೇಶಕ್ಕೆ ಕಳೆತಂದ ಕಲಾವಿದೆ ಗೌರಿ...

ರಂಗಪ್ರವೇಶಕ್ಕೆ ಕಳೆತಂದ ಕಲಾವಿದೆ ಗೌರಿ ಅರುಣ್ ಮೂರ್ತಿ

ಶಶಿಕರ ಪಾತೂರುಶಶಿಕರ ಪಾತೂರು27 Nov 2017 10:09 PM IST
share
ರಂಗಪ್ರವೇಶಕ್ಕೆ ಕಳೆತಂದ ಕಲಾವಿದೆ ಗೌರಿ ಅರುಣ್ ಮೂರ್ತಿ

ಆ ಹುಡುಗಿ ಜರ್ಜರದೊಂದಿಗೆ ರಂಗಮಂದಿರ ಪ್ರವೇಶಿಸಿದ ರೀತಿಯೇ ಭರ್ಜರಿಯಾಗಿತ್ತು! ಹಾಗೆ ಅನಿಸಿದ್ದು ಗೌರಿ ಅರುಣ್ ಮೂರ್ತಿಯ ಭರತನಾಟ್ಯ ರಂಗಪ್ರವೇಶ‌ ಕಂಡಾಗ. ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ರವಿವಾರ ನಡೆದ ಕಾರ್ಯಕ್ರಮ ನೂರಾರು ಕಲಾರಾಧಕರ ಮನಸೂರೆಗೊಳಿಸಿತು.

ಪುಷ್ಪಾಂಜಲಿ ಆದಿತಾಳದಲ್ಲಿ ವಿಜಯವಸಂತಿ ರಾಗ, ಅಲರಿಪು ತೀಸ್ರಜತಿ ರೂಪಕ ತಾಳ ಅನ್ನಮಾಚಾರ್ಯರಿಂದ ಸಂಯೋಜಿಸಲಾದ ಸ್ವರಜತಿ "ರಾರ ವೇಣು ಗೋಪ ಬಾಲ" ಆದಿತಾಳ ಬಿಹಾರಿ ರಾಗ; ದುರ್ಗಾ ದೇವಿ ಕೃತಿ ಆದಿತಾಳ ನವರಸ ಕನ್ನಡ ರಾಗ, ದ್ವಾರ್ಕಿ ಕೃಷ್ ಸ್ವಾಮಿಯವರಿಂದ ಸಂಯೋಜನೆಗೊಂಡ ವರ್ಣ 'ಸುಂದರ ಮೋಹನ' ಮುರಳೀಧರ ಆದಿತಾಳ ಕೀರವಾಣಿ ರಾಗ ಹೀಗೆ ಪ್ರತಿಯೊಂದರಲ್ಲಿಯೂ ಭರವಸೆ ಮೂಡಿಸುವ ಪ್ರದರ್ಶನ ನೀಡಿದರು ಗೌರಿ. 

ಡಿ ವಿ ಗುಂಡಪ್ಪನವರ ಮಂಕುತಿಮ್ಮನ ಕಗ್ಗವನ್ನು ರಾಗಮಾಲಿಕವಾಗಿ ಬಳಸಿಕೊಂಡಿದ್ದು ವಿಶೇಷವಾಗಿತ್ತು. ಜಯದೇವ ಸಂಯೋಜಿತ ಆದಿತಾಳ ರಾಗಮಾಲಿಕದ 'ಸಂಚಾರ..' ಡಾ. ಶತಾವಧಾನಿ ಗಣೇಶ್ ಆದಿತಾಳದಲ್ಲಿ ಸಂಯೋಜಿಸಿರುವ 'ಸುಮನಸ' ರಂಜಿನಿ ರಾಗ ಕೂಡ ಗೌರಿಯ ವೈವಿಧ್ಯಮಯ ಭಾವ ಭಂಗಿಗಳನ್ನು ವೀಕ್ಷಕರಿಗೆ ಅನಾವರಣಗೊಳಿಸಿತು.

ಮಲ್ಲಿಕಾಮೋದ ತಾಳ ಷಣ್ಮುಖ ಪ್ರಿಯರಾಗ ಮತ್ತು ರಾಗ ಮಾಲಿಕದಲ್ಲಿ 'ಮಯೂರ ನಂದಿನಿ'ಯ ಪ್ರದರ್ಶನದಲ್ಲಿ ಒಂದು ವಿಶೇಷತೆಯಿತ್ತು. ನೃತ್ಯ ಮುಗಿಯುವ ವೇಳೆಗೆ ಗೌರಿ ತಮ್ಮ ಪಾದಗಳನ್ನು ಬಳಸಿ ವೇದಿಕೆಯ ಮೇಲೆ ರಂಗೋಲಿ ಹುಡಿಯಲ್ಲಿ ಮಯೂರದ ಚಿತ್ರವನ್ನು ಬಿಡಿಸಿ ಪೂರ್ಣಗೊಳಿಸಿದ್ದರು.

ಸಂಪ್ರದಾಯದಂತೆ ಅಂತಿಮವಾಗಿ ಮಂಗಳಂ ಮೂಲಕ ಪ್ರೇಕ್ಷಕ ಮತ್ತು ಸಂಗೀತಜ್ಞರಿಗೆ ಸೇರಿದಂತೆ ಗುರುವಂದನೆ ಸಲ್ಲಿಸಿದಾಗ ಗೌರಿಯ ಜತೆಗೆ ವೀಕ್ಷಕರ ಕಂಗಳಲ್ಲಿಯೂ ಆನಂದ ಭಾಷ್ಪ‌‌ ಕಾಣಬಹುದಿತ್ತು.ಹಿನ್ನೆಲೆಯಲ್ಲಿ ವಿದುಷಿ ದೀಪ್ತಿ ಶ್ರೀನಾಥ್ ಕಂಠ, ಮೃದಂಗ ವಿದ್ವಾನ್ ಲಿಂಗರಾಜು, ರಘು ನಂದನ್ ರ ಕೊಳಲು, ವೀಣೆ ವಿದ್ವಾನ್ ವಿ ಗೋಪಾಲ್ ಮತ್ತು ಕಾರ್ತಿಕ್ ರ ಉಪಸ್ಥಿತಿ, ಬೆಳಕು ಮತ್ತು ಒಟ್ಟು ವೇದಿಕೆಯ ರಂಗಸಜ್ಜಿಕೆ ಆಕರ್ಷಕವಾಗಿತ್ತು.

ಗೌರಿ ತಮ್ಮ ಏಳನೇ ವರ್ಷದಿಂದಲೇ ಅವರ ಅತ್ತೆ ಡಾ. ವೀಣಾ ಮೂರ್ತಿ ವಿಜಯ್ ಯವರಿಂದ ಭರತನಾಟ್ಯದ ಶಿಕ್ಷಣ ಆರಂಭಿಸಿ ಜ್ಯೂನಿಯರ್ ಪರೀಕ್ಷೆ ಪಾಸಾಗಿರುತ್ತಾರೆ. ಅದರ ಒಂದು ವರ್ಷದ ಬಳಿಕ ಕರ್ನಾಟಕ ಸಂಗೀತದಲ್ಲಿಯೂ ಜ್ಯೂನಿಯರ್ ಪಾಸಾದರು. ಬಾಲಿವುಡ್ ನ ಖ್ಯಾತ ನೃತ್ಯನಿರ್ದೇಶಕ  ಶಾಮಕ್ ದಾವರ್ ಅವರ ಬಳಿ ಒಂದು ವರ್ಷ ಪಾಶ್ಚ್ಯಾತ್ಯ ನೃತ್ಯ ಪ್ರಕಾರದ ಕಲಿಕೆ, ಯೋಗ, ಬಾಸ್ಕೆಟ್ ಬಾಲ್, ಛಾಯಾಗ್ರಹಣ, ಈಜು.. ಹೀಗೆ ವಿವಿಧ ವಿಭಾಗಗಳಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತು ಪಡಿಸಿರುವ ಗೌರಿ ಪ್ರಸ್ತುತ ಮೌಂಟ್ ಕಾರ್ಮೆಲ್ ಕಾಲೇಜ್ ನಲ್ಲಿ ದ್ವಿತೀಯ ಬಿಎ ವಿದ್ಯಾರ್ಥಿನಿಯಾಗಿದ್ದಾರೆ. ಕಿರುತೆರೆ ನಟಿ, ಕಂಠದಾನ ಕಲಾವಿದೆ, ದೃಶ್ಯ, ಸಂಭಾಷಣೆ, ಸಾಹಿತ್ಯ ರಚನಗಾರ್ತಿ ಕುಮುದವಲ್ಲಿ ಅರುಣ್ ಮೂರ್ತಿಯ ಪುತ್ರಿ ಎನ್ನುವುದು ಗಮನಾರ್ಹ. 

ಸಮಾರಂಭದಲ್ಲಿ ಖ್ಯಾತ ನೃತ್ಯ ಕಲಾಮಂದಿರ್ ಭಾನುಮತಿ, ಯಕ್ಷಗಾನ ಕಲಾವಿದ ಮಂಟಪ‌ ಪ್ರಭಾಕರ ಉಪಾಧ್ಯಾಯ, ಚಿತ್ರ ಕಲಾವಿದ
ಡಾ. ಬಿಕೆಎಸ್ ವರ್ಮ, ಮೊದಲಾದ ಪ್ರಮುಖರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಗೌರಿಯ ತಾತ ಹಿರಿಯ ಗಮಕ ಕವಿ ಜಯರಾಮ ರಾವ್, ಸಂದ್ಯಾ ಕಿರಣ್, ಕರಣ್ ಸುಬ್ರಹ್ಮಣ್ಯ, ಆರ್ ವಿ ರಾಘವೇಂದ್ರ, ನಟ ಸುಮಂತ್, ಲೇಖಕಿ ಗೀತಾ ಉಪೇಂದ್ರ ಸೇರಿದಂತೆ ಸಾಕಷ್ಟು ಗಣ್ಯರ ದಂಡು ಸೇರಿತ್ತು‌. ಜನಪ್ರಿಯ ನೃತ್ಯ ಕಲಾವಿದೆಯರಾದ ಶಮಾಕೃಷ್ಣ ಮತ್ತು ಸಮನ್ವಿತಾ  ಕಾರ್ಯಕ್ರಮ  ನಿರೂಪಿಸಿದರು. ಕುಮುದವಲ್ಲಿಯವರು ವಂದಿಸಿದರು.
 

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X