ಕಲ್ಯಾಣಪುರ: ಪವಿತ್ರ ಪರಮಪ್ರಸಾದದ ವಾರ್ಷಿಕ ಮೆರವಣಿಗೆ

ಉಡುಪಿ, ನ.27: ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಪವಿತ್ರ ಪರಮಪ್ರಸಾದದ ವಾರ್ಷಿಕ ಮೆರವಣಿಗೆಯು ರವಿವಾರ ಕಲ್ಯಾಣಪುರ ಮಿಲಾಗ್ರಿಸ್ ಮಹಾದೇವಾ ಲಯದಲ್ಲಿ ಆರಂಭಗೊಂಡು, ನಂತರ ಸಂತೆಕಟ್ಟೆ ವೌಂಟ್ ರೋಸರಿ ಇಗರ್ಜಿ ಯಲ್ಲಿ ಸಂಪನ್ನಗೊಂಡಿತು.
ಮಿಲಾಗ್ರಿಸ್‌ಮಹಾದೇವಾಲಯದಲ್ಲಿ ಪವಿತ್ರ ಪರಮಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವದ ಕೃತಜ್ಞತಾ ಬಲಿಪೂಜೆ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತೀ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಅಧ್ಯಕ್ಷತೆಯಲ್ಲಿ ಧರ್ಮಪ್ರಾಂತದ 51 ಚರ್ಚ್‌ಗಳ ಧರ್ಮಗುರುಗಳು ಹಾಗೂ ಇತರ ಗುರುಗಳ ಸಹಭಾಗಿತ್ವದಲ್ಲಿ, ಸಾವಿರಾರು ಭಕ್ತಾದಿಗಳ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.
ಬಳಿಕ ಪರಮ ಪ್ರಸಾದವನ್ನು ಮಿಲಾಗ್ರಿಸ್ ಕ್ಯಾಥೆಡ್ರಲ್‌ನಿಂದ ತೆರೆದ ಅಲಂಕೃತ ವಾಹನದಲ್ಲಿ ಮೆರವಣಿಗೆಯ ಮೂಲಕ ಸಂತೆಕಟ್ಟೆಯ ವೌಂಟ್ ರೋಜರಿ ದೇವಾಲಯದವರೆಗೆ ಹಾಡು ಕೀರ್ತನೆಗಳ ಮೂಲಕ ಭಕ್ತಿಪೂರ್ವಕವಾಗಿ ಕೊಂಡೊಯ್ದು ಸಾರ್ಜನಿಕವಾಗಿ ಗೌರವ ಸಲ್ಲಿಸಲಾಯಿತು.
ಪ್ರಧಾನ ವೇದಿಕೆಯಲ್ಲಿ ಪರಮ ಪ್ರಸಾದವನ್ನು ಇಟ್ಟು ದೂಪಾರಾಧನೆ ಮಾಡಿದ ಬಳಿಕ ಉದ್ಯಾವರ ಚರ್ಚಿನ ವಂ.ಡಾ.ಸ್ವಾಮಿ ರೋಕ್ ಡಿಸೋಜ ಆಶೀರ್ವಚನ ನೀಡಿದರು. ಸುವಾರ್ತಾ ಪ್ರಸಾರ ರವಿವಾರದ ಸಂದರ್ಭದಲ್ಲಿ ಧರ್ಮಪ್ರಾಂತದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಕಾಣಿಕೆಯನ್ನು ಸಂಗ್ರಹಿಸಿದ ಚರ್ಚು ಗಳನ್ನು ಧರ್ಮಾಧ್ಯಕ್ಷರು ಗೌರವಿಸಿದರು.
ಉಡುಪಿ ಧರ್ಮಪ್ರಾಂತದ ವಿಕಾರ್ ಜನರಲ್ ವಂ.ಬ್ಯಾಪ್ಟಿಸ್ಟ್ ಮಿನೇಜಸ್, ವಲಯಗಳ ಪ್ರಧಾನ ಧರ್ಮಗುರುಗಳಾದ ವಂ.ವಲೇರೀಯನ್ ಮೆಂಡೊನ್ಸಾ, ವಂ.ಅನಿಲ್ ಡಿಸೋಜ, ವಂ.ಸ್ಟ್ಯಾನಿ ತಾವ್ರೊ, ವಂ.ಜೊಸ್ವಿ ಫೆರ್ನಾಂಡಿಸ್, ವಂ. ಸ್ಟ್ಯಾನಿ ಬಿ.ಲೋಬೊ, ವೌಂಟ್ ರೋಸರಿ ಚರ್ಚಿನ ವಂ.ಲೆಸ್ಲಿ ಡಿಸೋಜ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಮೊದ ಲಾದವರು ಉಪಸ್ಥಿತರಿದ್ದರು.







