ಎಲ್ಲೂರು ಅದಾನಿ ಆರೋಗ್ಯ ವಿಮೆ ಗ್ರಾಮ

ಕಾಪು, ನ.27: ಅದಾನಿ ಸಮೂಹದ ಯುಪಿಸಿಎಲ್ ಸಂಸ್ಥೆಯು ಅದಾನಿ ಪ್ರತಿಷ್ಠಾನದ ವತಿಯಿಂದ ಎಲ್ಲೂರು ಗ್ರಾಮದ ಬಾಕಿ ಉಳಿದ ಗ್ರಾಮಸ್ಥರಿಗೆ ಇಂದು ಎರಡನೆ ಹಂತದ ಅದಾನಿ ಆರೋಗ್ಯ ಚೀಟಿಯನ್ನು ವಿತರಿಸುವ ಮೂಲಕ ಇಡೀ ಗ್ರಾಮಕ್ಕೆ ಆರೋಗ್ಯ ವಿಮೆ ಮಾಡಿಸಿದೆ.
ಎಲ್ಲೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಯುಪಿಸಿಎಲ್ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಮತ್ತು ಎಲ್ಲೂರು ಗ್ರಾಪಂ ಅಧ್ಯಕ್ಷ ವಸಂತಿ ಮಧ್ವರಾಜ್ ಸುಮಾರು 1000 ಗ್ರಾಮಸ್ಥರನ್ನೊಳಗೊಂಡ 170 ಕುಟುಂಬಗಳಿಗೆ ಅದಾನಿ ಆರೋಗ್ಯ ಚೀಟಿಯನ್ನು ವಿತರಿಸಿದರು.
ಇಂದಿನ 1000 ಗ್ರಾಮಸ್ಥರನ್ನು ಸೇರಿಸಿ ಒಟ್ಟು ಸುಮಾರು 13,000 ಗ್ರಾಮಸ್ಥರು ವಿಮೆಯ ಫಲಾನುಭವಿಗಳಾಗಿದ್ದಾರೆ. ಆರೋಗ್ಯ ಚೀಟಿಯಿಂದ ಕುಟುಂಬದ ಎಲ್ಲಾ ಸದಸ್ಯರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರತಿಷ್ಟಿತ 60 ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎಂದು ಕಿಶೋರ್ ಆಳ್ವ ತಿಳಿಸಿದರು.
ಗ್ರಾಪಂ ಸದಸ್ಯ ಸಾಧು ಶೆಟ್ಟಿ, ಯುಪಿಸಿಎಲ್ ಕಂಪನಿಯ ಎಜಿಎಂ ಗಿರೀಶ್ ನಾವಡ, ಹಿರಿಯ ಪ್ರಬಂಧಕ ರವಿ ಜೇರೆ, ಅದಾನಿ ಫೌಂಡೇಶನ್‌ನ ವಿನೀತ್ ಅಂಚನ್, ಸುಕೇಶ್ ಸುವರ್ಣ, ಅನುದೀಪ್ ಪೂಜಾರಿ ಉಪಸ್ಥಿತರಿದ್ದರು.







