ಬೈಲೂರು ಕೊಲೆ ಪ್ರಕರಣ: ತನಿಖೆಗೆ ತಂಡ ರಚನೆ
ಉಡುಪಿ, ನ.27: ಬೈಲೂರು ಸಮೀಪದ ವಾಸುಕಿನಗರದ ವಸಂತ್ ಕುಮಾರ್(45) ಕೊಲೆ ಪ್ರಕರಣದ ತನಿಖೆಯನ್ನು ಆರಂಭಿಸಿರುವ ಪೊಲೀಸರು ಅದಕ್ಕಾಗಿ ಎರಡು ತಂಡಗಳನ್ನು ರಚಿಸಿದ್ದಾರೆ.
ಮನೆಯಲ್ಲಿ ಒಂಟಿಯಾಗಿದ್ದ ವಸಂತ್ ಕುಮಾರ್‌ಗೆ ನ.23ರಂದು ಬೆಳಗ್ಗೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿ ದ್ದರು. ಇವರು ತನ್ನ ಅಕ್ಕ ಉಮಾ ಎನ್. ಎಂಬವರೊಂದಿಗೆ ವಾಸವಾಗಿದ್ದು, ಈ ಸಮಯದಲ್ಲಿ ಉಮಾ ಮುಂಬೈಗೆ ತೆರಳಿದ್ದರೆನ್ನಲಾಗಿದೆ.
ಇದೀಗ ಊರಿಗೆ ಆಗಮಿಸಿರುವ ಉಮಾ ಅವರ ವಿಚಾರಣೆಯನ್ನು ಪೊಲೀಸರು ನಡೆಸಿದ್ದು, ಕೆಲವು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಕೊಲೆಗೆ ಸಂಬಂಧಿಸಿದ ಕೆಲವು ಸುಳಿವುಗಳು ಸಿಗುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ವಸಂತ್ ಕುಮಾರ್ ಮನೆಯಲ್ಲಿ ಮಕ್ಕಳಿಗೆ ಟ್ಯೂಶನ್ ಕೊಡುವ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story





