ಬಾಹ್ಯಾಕಾಶ ಕಕ್ಷೆಯಲ್ಲಿರುವ ಅವಶೇಷಗಳ ಪತ್ತೆಗೆ ನಾಸಾ ಸೆನ್ಸರ್

ವಾಶಿಂಗ್ಟನ್, ನ. 27: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದ ಸುತ್ತಲಿನ ಕಕ್ಷೆಯಲ್ಲಿರುವ ಅವಶೇಷಗಳ ಪ್ರಮಾಣದ ಬಗ್ಗೆ ಅಂದಾಜು ಮಾಡಲು ‘ನಾಸಾ’ ಡಿಸೆಂಬರ್ 4ರಂದು ಸಂವೇದಿ (ಸೆನ್ಸರ್)ಯೊಂದನ್ನು ಬಾಹ್ಯಾಕಾಶಕ್ಕೆ ಉಡಾಯಿಸಲಿದೆ.
ಈ ಉಡಾವಣೆಯ ಮೂಲಕ ನಡೆಸಲಾಗುವ ಸಂಶೋಧನೆಯು ಕಕ್ಷೆಗಳಲ್ಲಿರುವ ಅವಶೇಷಗಳು ಮಾನವ ಜೀವಗಳು ಮತ್ತು ಉಪಕರಣಗಳಿಗೆ ಎದುರಾಗುವ ಅಪಾಯದ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡಲಿವೆ ಎಂದು ನಾಸಾ ತಿಳಿಸಿದೆ.
ಖಾಸಗಿ ಬಾಹ್ಯಾಕಾಶ ಕಂಪೆನಿ ಸ್ಪೇಸ್ ಎಕ್ಸ್ ನಾಸಾದ ಸೆನ್ಸರನ್ನು ಡಿಸೆಂಬರ್ 4ರಂದು ಉಡಾಯಿಸಲಿದೆ.
ಐಎಸ್‌ಎಸ್‌ನ ಹೊರಭಾಗದಲ್ಲಿ ಜೋಡಿಸಲ್ಪಡುವ ಬಾಹ್ಯಾಕಾಶ ಅವಶೇಷಗಳ ಸಂವೇದಿ (ಸ್ಪೇಸ್ ಡೆಬ್ರಿಸ್ ಸೆನ್ಸರ್-ಎಸ್‌ಡಿಎಸ್) ಎರಡರಿಂದ ಮೂರು ವರ್ಷಗಳ ಕಾಲ ಬಾಹ್ಯಾಕಾಶ ನಿಲ್ದಾಣದ ಸುತ್ತಲಿನ ಕಕ್ಷೆಯಲ್ಲಿರುವ ಅವಶೇಷ ಸ್ಥಿತಿಗತಿಯನ್ನು ಅಂದಾಜಿಸಲಿದೆ.
Next Story





