18,025 ಕೋಟಿ ರೂ.ಗೆ ‘ಟೈಮ್’ ಮಾರಾಟ

ವಾಶಿಂಗ್ಟನ್, ನ. 27: ‘ಟೈಮ್’ ಮ್ಯಾಗಝಿನ್‌ನ ಪ್ರಕಾಶಕ ಸಂಸ್ಥೆ ‘ಟೈಮ್ ಇಂಕ್’ ಮಾಧ್ಯಮ ಗುಂಪು ಮೆರೆಡಿತ್ ಕಾರ್ಪೊರೇಶನ್‌ಗೆ 2.8 ಬಿಲಿಯ ಡಾಲರ್ (ಸುಮಾರು 18,025 ಕೋಟಿ ರೂಪಾಯಿ)ಗೆ ಮಾರಾಟಗೊಳ್ಳಲಿದೆ.
ಮೆರೆಡಿತ್ ಕಾರ್ಪೊರೇಶನನ್ನು ಕನ್ಸರ್ವೇಟಿವ್ (ಸಂಪ್ರದಾಯ) ಪರ ಒಲವುಳ್ಳ ಕೋಚ್ ಬ್ರದರ್ಸ್ ನಡೆಸುತ್ತಿದ್ದಾರೆ.
ಟೈಮ್ ಇಂಕ್ ‘ಫಾರ್ಚುನ್’ ಮತ್ತು ‘ಸ್ಪೋರ್ಟ್ಸ್ ಇಲ್ಲಸ್ಟ್ರೇಟಡ್’ ಪತ್ರಿಕೆಗಳನ್ನೂ ನಡೆಸುತ್ತಿದೆ.
Next Story





