ಹೊಕ್ಕಾಡಿಗೋಳಿ: ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ
98 ಜೋಡಿ ಓಟದ ಕೋಣಗಳು ಭಾಗಿ

ಬಂಟ್ವಾಳ, ನ. 27: ತಾಲೂಕಿನ ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿಯಲ್ಲಿ ನಡೆದ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳದಲ್ಲಿ ಒಟ್ಟು 98 ಜೋಡಿ ಓಟದ ಕೋಣಗಳು ಭಾಗವಹಿಸಿದ್ದು, ಸಹಸ್ರಾರು ಮಂದಿ ಕಂಬಳಾಸಕ್ತರು ಪಾಲ್ಗೊಂಡಿದ್ದರು.
ಈ ಪೈಕಿ ನೇಗಿಲು ಕಿರಿಯ-36, ನೇಗಿಲು ಹಿರಿಯ -27, ಹಗ್ಗ ಕಿರಿಯ-15, ಹಗ್ಗ ಹಿರಿಯ-13, ಅಡ್ಡಹಲಗೆ-6, ಕನೆಹಲಗೆ-1 ಜೋಡಿ ಓಟದ ಕೋಣಗಳು ಭಾಗವಹಿಸಿ ಗಮನ ಸೆಳೆಯಿತು.
ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ, ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಗೌರವ ಸಲಹೆಗಾರ ಸುರೇಶ ಶೆಟ್ಟಿ ಮತ್ತಿತರರು ಇದ್ದರು.
ಫಲಿತಾಂಶ
ಕನೆಹಲಗೆ: ವಾಮಂಜೂರು ತಿರುವೈಲುಗುತ್ತು ನವೀನ್‌ಚಂದ್ರ ಆಳ್ವ -ಪ್ರಥಮ. (ಓಡಿಸಿದವರು: ನಾರಾವಿ ಯುವರಾಜ್ ಜೈನ್).
ಹಗ್ಗ ಹಿರಿಯ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್-ಪ್ರಥಮ. (ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ)
ನಂದಳಿಕೆ ನವ್ಯತಾ ಶ್ರೀಕಾಂತ್ ಭಟ್ (ಬಿ)-ದ್ವಿತೀಯ (ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ ಎಂ.ಶೆಟ್ಟಿ)
ಹಗ್ಗ ಕಿರಿಯ: ಮಿಜಾರು ಪ್ರಸಾದ ನಿಲಯ ಶಕ್ತಿಪ್ರಸಾದ್ ಶೆಟ್ಟಿ-ಪ್ರಥಮ. (ಓಡಿಸಿದವರು: ಮಾರ್ನಾಡ್ ರಾಜೇಶ್), ಜಪ್ಪು ಮಣ್ಣುತೋಟ ಗುತ್ತು ಸಾಚಿ ಅನಿಲ್ ಶೆಟ್ಟಿ -ದ್ವಿತೀಯ. (ಓಡಿಸಿದವರು: ಬಂಗಾಡಿ ಹಮೀದ್) ನೇಗಿಲು ಹಿರಿಯ: ಇರುವೈಲು ಪಾಣೇಲ ಬಾಡ ಪೂಜಾರಿ - ಪ್ರಥಮ. (ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ), ಕಕ್ಯಪದವು ಪೆಂರ್ಗಾಲ್ ಬಾಬು ವೆಂಕಪ್ಪ ಗೌಡ -ದ್ವಿತೀಯ. (ಓಡಿಸಿದವರು: ಬಾರಾಡಿ ನತೇಶ್)
ನೇಗಿಲು ಕಿರಿಯ: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ -ಪ್ರಥಮ. (ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ), ಮರೋಡಿ ಕೆಳಗಿನ ಮನೆ ಕೃತೇಶ್ ಅಣ್ಣಿ ಪೂಜಾರಿ -ದ್ವಿತೀಯ. (ಓಡಿಸಿದವರು: ಮರೋಡಿ ಶ್ರೀಧರ)
ಅಡ್ಡಹಲಗೆ: ಆಲದಪದವು ಮೇಗಿನಮನೆ ಶುಭ್ರತ್ ಶೆಟ್ಟಿ -ಪ್ರಥಮ. (ಓಡಿಸಿದವರು: ಮುಳಿಕಾರು ಕೇವುಡೇಲು ಅಣ್ಣಿ ದೇವಾಡಿಗ), ಗುರುಪುರ ಕೆದುಬರಿ ಯಶೋಧ ಗುರುವಪ್ಪ ಪೂಜಾರಿ-ದ್ವಿತೀಯ. (ಓಡಿಸಿದವರು: ಸಾವ್ಯ ಗಂಗಯ್ಯ ಪೂಜಾರಿ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.







