ಕೆ.ಸಿ.ನಗರದಲ್ಲಿ ರಕ್ತದಾನ ಶಿಬಿರ

ಉಳ್ಳಾಲ, ನ. 27: ಎಸ್‌ಎಸ್‌ಎಫ್ ತಲಪಾಡಿ ಇದರ ಅಧೀನದಲ್ಲಿರುವ ಇನ್ಸೈರ್ ಬ್ಲಡ್ ಡೋನರ್ಸ್ ಸೆಲ್ ಇದರ ಆಶ್ರಯದಲ್ಲಿ ಅಝೆನ್ಯೋ ಇನ್ಪ್ರಾ ಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್ ಮತ್ತು ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಕೆ.ಸಿ.ನಗರ ಫಲಾಹ್ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ರಾಜ್ಯ ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಬಳಿಕ ಮಾತನಾಡಿ ಅವರು ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಕೃತಕವಾಗಿ ರಕ್ತವನ್ನು ಉತ್ಪಾದಿಸಲು ಇಲ್ಲಿಯ ತನಕ ಸಾಧ್ಯವಿಲ್ಲ. ರಕ್ತಬೇಡಿಕೆಯನ್ನು ಯುವ ಜನತೆ ಮುಂದೆ ಬರಬೇಕಾ ಅಗತ್ಯತೆ ಇದೆ ಎಂದು ಹೇಳಿದರು.
ಎಸ್‌ಎಸ್‌ಎಫ್ ತಲಪಾಡಿ ಸೆಕ್ಟರ್ ಅಧ್ಯಕ್ಷ ಅಬ್ದುರ್ರಹೀಂ ಝಹ್ರಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಲ್ಲಿ ಆಹಾರ ಸಚಿವ ಯು.ಟಿ.ಖಾದರ್. ಅಸ್ಸಯ್ಯಿದ್ ಹುಸೈನ್ ಕೋಯ ತಂಙಳ್ ಅಲ್ ಬುಖಾರಿ ಪೂಮಣ್ಣು, ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ, ತಾಲೂಕು ಪಂಚಾಯತಿ ಸದಸ್ಯ ಸಿದ್ದೀಕ್ ಕೊಳಂಗರೆ, ಎಸ್‌ಎಸ್‌ಎಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಸಖಾಫಿ. ಇನ್ಸೈರ್ ಬ್ಲಡ್ ಡೋನರ್ಸ್ ಸೆಲ್ ನಿರ್ದೇಶಕ ಮುಸ್ತಫಾ ಝಹರಿ, ಎಸ್‌ಎಸ್‌ಎಫ್ ಕೋಟೆಕಾರ್ ಸೆಕ್ಟರ್ ಪ್ರಮುಖರಾದ ಜುಬೈರ್ ಝಹ್ರಿ, ಫಲಾಹ್ ವಿದ್ಯಾಸಂಸ್ಥೆ ಅಧ್ಯಕ್ಷರಾದ ಯು.ಬಿ.ಮೊಹಮ್ಮದ್, ಉಚ್ಚಿಲ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ, ಎಸ್‌ವೈಎಸ್ ಕೆಸಿರೋಡ್ ಸೆಂಟರ್ ಅಧ್ಯಕ್ಷ ಉಮ್ಮರ್ ಮಾಸ್ಟರ್, ಕೆಎಂಸಿ ಬ್ಲಡ್ ಬ್ಯಾಂಕ್‌ನ ಸೈ:ಫುದ್ದೀನ್, ಯುವ ಕಾಂಗ್ರೆಸ್‌ನ ನಾಸೀರ್ ಸಾಮಣಿಗೆ, ತಲಪಾಡಿ ಪಂಚಾಯಿತಿ ಸದಸ್ಯ ಹಸೈನಾರ್, ಸಲಾಂ ಕೆ.ಸಿ.ರೋಡ್ ಮೊದಲಾದವರು ಉಪಸ್ಥಿತರಿದ್ದರು.
ಇನ್ಸೈರ್ ಬ್ಲಡ್ ಡೋನರ್ಸ್ ಸೆಲ್ ನಿರ್ದೇಶಕ ಅಬ್ದುಲ್ ಹಖೀಂ ಪೂಮಣ್ಣು ಸ್ವಾತಿಸಿ, ಕಾರ್ಯಕ್ರಮ ನಿರೂಪಿಸಿದರು.







