ಕಾಟಿಪಳ್ಳ: ಬಂಟಿಂಗ್ಸ್ ವಿವಾದ; ಮಾತಿನ ಚಕಮಕಿ

ಮಂಗಳೂರು, ನ.27: ಸುರತ್ಕಲ್ ಸಮೀಪದ ಕಾಟಿಪಳ್ಳದ ಭಾರತ್ ಕೆಫೆ ಬಳಿ ಬಂಟಿಂಗ್ಸ್‌ಗೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ವಿವಾದ ಸೃಷ್ಟಿಯಾಗಿ ಮಾತಿನ ಚಕಮಕಿ ನಡೆದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಉಡುಪಿಯಲ್ಲಿ ಜರಗಿದ ಧರ್ಮ ಸಂಸದ್ ಕಾರ್ಯಕ್ರಮದ ಹಿನ್ನಲೆಯಲ್ಲಿ ಕೇಸರಿ ಬಂಟಿಂಗ್ಸ್‌ನ್ನು ಕಟ್ಟಲಾದ ಕಂಬಕ್ಕೆ ಮೀಲಾದುನ್ನೆಬಿಗೆ ಸಂಬಂಧಿಸಿದ ಬಂಟಿಂಗ್ಸ್‌ನ್ನು ಕಟ್ಟಲಾಗಿತ್ತು ಎಂದು ತಿಳಿದುಬಂದಿದೆ.
ಈ ಸಂದರ್ಭ ಕೇಸರಿ ಬಂಟಿಂಗ್ಸ್ ಕೆಳಗೆ ಬಿದ್ದಿದೆ ಮತ್ತು ಹಸಿರು ಬಂಟಿಂಗ್ಸ್‌ನ್ನು ಮೇಲ್ಗಡೆ ಕಟ್ಟಲಾಗಿದೆ ಎಂದು ಗುಂಪೊಂದು ತಗಾದೆ ತೆಗೆಯಿತು ಎನ್ನಲಾಗಿದ್ದು, ಇದರಿಂದ ಇತ್ತಂಡದ ಗುಂಪಿನ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ವಿಷಯ ತಿಳಿದ ಸುರತ್ಕಲ್ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
Next Story





