ಬ್ರಹ್ಮಾವರ: ವಿವಿಧ ರಸ್ತೆ ಕಾಮಗಾರಿ ಉದ್ಘಾಟನೆ

ಉಡುಪಿ, ನ.27: ನೀಲಾವರ ಗ್ರಾಪಂ ವ್ಯಾಪ್ತಿಯಲ್ಲಿ 50 ಲಕ್ಷ ರೂ ಮೊತ್ತದ ವಿವಿಧ ರಸ್ತೆ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸೋಮವಾರ ಉದ್ಘಾಟಿಸಿದರು.
ದೇವಾಡಿಗರ ಬೆಟ್ಟು ಅಂಗನವಾಡಿ ರಸ್ತೆ, ದೇವಾಡಿಗರ ಬೆಟ್ಟು ರಸ್ತೆ, ಮಧ್ಯಸ್ಥರ ಬೆಟ್ಟು ರಸ್ತೆ, ಕೋಡಿ ಬ್ರಹ್ಮಲಿಂಗೇಶ್ವರ ರಸ್ತೆ ಹಾಗೂ ಮಾರ್ಕೂಡಿ ರಸ್ತೆ ಕಾಮಗಾರಿಗಳನ್ನು ಸಚಿವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನೀಲಾವರ ಗ್ರಾಪಂ ಅಧ್ಯಕ್ಷೆ ಆಶಾ, ಕೆಡಿಪಿ ಸದಸ್ಯ ಉಮೇಶ್ ನಾಯ್ಕಾ ಮತ್ತಿತರರು ಉಪಸ್ಥಿತರಿದ್ದರು.
Next Story





