ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್:ಭಾರತಕ್ಕೆ ಟ್ರೋಫಿ

ಹೊಸದಿಲ್ಲಿ, ನ.27: ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು 36-22 ಅಂಕಗಳಿಂದ ಸೋಲಿಸಿದ ಭಾರತ ಚಾಂಪಿಯನ್ ಕಿರೀಟ ಧರಿಸಿತು. ಇರಾನ್‌ನಲ್ಲಿ ನಡೆದ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಅಜಯ್ ಠಾಕೂರ್ ಮತ್ತೊಮ್ಮೆ ಭಾರತದ ಪರ ಹೀರೋವಾಗಿ ಹೊರಹೊಮ್ಮಿದರು. ಪಾಕಿಸ್ತಾನ ವಿರುದ್ಧ ಫೈನಲ್‌ನಲ್ಲಿ ಠಾಕೂರ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಭಾರತ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಫೈನಲ್‌ನಲ್ಲಿ ಪಾಕ್ ವಿರುದ್ಧ 14 ಅಂಕಗಳಿಂದ ಜಯ ಸಾಧಿಸಿರುವ ಭಾರತ ಮೊದಲಾರ್ಧದಲ್ಲಿ 25-10 ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲೂ ಮೇಲುಗೈ ಸಾಧಿಸಿ ಭಾರತ ತಂಡ ಪಾಕ್ ಮೇಲೆ ಸವಾರಿ ಮಾಡಿತು.
Next Story





