ಚಪ್ಪಲಿಯಲ್ಲಿ ಚಿನ್ನ ಸಾಗಾಟಕ್ಕೆ ಯತ್ನ : ಆರೋಪಿ ಸೆರೆ
ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನ
ಮಂಗಳೂರು, ನ.27: ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ತನ್ನ ಚಪ್ಪಲಿಯಲ್ಲಿ 804 ಗ್ರಾಂ ಚಿನ್ನ ಅಡಗಿಸಿ ಸಾಗಾಟ ಮಾಡುವಾಗ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಬಿದ್ದ ಘಟನೆ ಸೋಮವಾರ ನಡೆದಿದೆ.
ಕಾಸರಗೋಡು ನಿವಾಸಿ ಅಹ್ಮದ್ ತಾಹೀರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದ್ದು, ತಕ್ಷಣ ಆರೋಪಿಯನ್ನು ಬಂಧಿಸಿದ್ದಾರೆ.
ಅಹ್ಮದ ತಾಹೀರ್ ದುಬೈ ಏರ್ ಇಂಡಿಯಾ ಎಕ್ಸೃ್ಪ್ರೆಸ್ ಐಎಕ್ಸ್ 814 ವಿಮಾನ ಮೂಲಕ ಮಂಗಳೂರಿಗೆ ಬಂದಿಳಿದಿದ್ದ. ಈ ಸಂದರ್ಭ ಅಧಿಕಾರಿಗಳು ಅನುಮಾನದ ಮೇಲೆ ತಪಾಸಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭ ತಾಹಿರ್ ಧರಿಸಿದ್ದ ಚಪ್ಪಲ್‌ನ ಸೋಲ್‌ನಲ್ಲಿ ಚಿನ್ನದ ಬಿಲ್ಲೆಗಳನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿವೆ.
ಚಪ್ಪಲ್‌ನಲ್ಲಿ ಅಡಗಿಸಿಡಲಾಗಿದ್ದ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 23.67 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
Next Story





