ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಬಜರಂಗ್, ವಿನೋದ್‌ಗೆ ಬೆಳ್ಳಿ

ಹೊಸದಿಲ್ಲಿ, ನ.27: ಏಷ್ಯನ್ ಚಾಂಪಿಯನ್ ಬಜರಂಗ್ ಪೂನಿಯಾ ಹಾಗೂ ವಿನೋದ್ ಕುಮಾರ್ ಅಂಡರ್-23 ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಪೊಲೆಂಡ್‌ನಲ್ಲಿ ನಡೆದ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಟ್ಟು 3 ಪದಕಗಳನ್ನು ಗೆದ್ದುಕೊಂಡಿತು.
ಏಕಪಕ್ಷೀಯವಾಗಿ ಸಾಗಿದ 65 ಕೆಜಿ ತೂಕ ವಿಭಾಗದ ಫೈನಲ್ ಪಂದ್ಯದಲ್ಲಿ ಬಜರಂಗ್ ರಶ್ಯದ ಕುಸ್ತಿಪಟು ಕುಲಾರ್ ವಿರುದ್ಧ 6-17 ರಿಂದ ಸೋತಿದ್ದಾರೆ. ಮತ್ತೊಂದು ಪಂದ್ಯದಲ್ಲಿ ವಿನೋದ್ ಅಮೆರಿಕದ ರಿಚರ್ಡ್ ಲೂಯಿಸ್ ವಿರುದ್ಧ 1-3 ರಿಂದ ಶರಣಾದರು. ಮಹಿಳೆಯರ 48 ಕೆಜಿ ತೂಕ ವಿಭಾಗದ ಫೈನಲ್‌ನಲ್ಲಿ ರಿತು ಫೋಗಟ್ ಬೆಳ್ಳಿ ಪದಕ ಜಯಿಸಿದ್ದಾರೆ.
Next Story





