ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನ ಕುಳಾಯಿ ಶಾಖೆಯಲ್ಲಿ ಹಣ ದುರ್ಬಲಕೆ ಪ್ರಕರಣ: ಆರೋಪಿಗಳ ಸೆರೆ ?
ಮಂಗಳೂರು, ನ. 28: ಇಂಡಿಯನ್ ಓವರ್ಸೀಸ್ ಬ್ಯಾಂಕ್‌ನ ಕುಳಾಯಿ ಶಾಖೆಯಲ್ಲಿ 55 ಕೋಟಿ ರೂ. ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಬ್ರಾಂಚ್ ಮ್ಯಾನೇಜರ್ ಸಹಿತ ಐದು ಮಂದಿಯನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಣ ದುರುಪಯೋಗಕ್ಕೆ ಸಂಬಂಧಿಸಿ ಬ್ಯಾಂಕಿನ ಕೆಲವು ಸಿಬ್ಬಂದಿಗಳ ವಿರುದ್ಧ ಆರೋಪಗಳು ಕೇಳಿಬಂದಿದ್ದವು. ಬ್ಯಾಂಕಿನ ಮ್ಯಾನೇಜರ್ ಶೆರಿನ್ ಮಧುಸೂದನ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಪ್ರಕರಣದಲ್ಲಿ ಸಹಕರಿಸಿದ್ದಾರೆನ್ನಲಾದ ಇತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ನಾಲ್ವರು ಆರೋಪಿಗಳ ಬಂಧನವನ್ನು ನಿರಾಕರಿಸಿರುವ ಪೊಲೀಸರು, ಶರಿನ್ ಮಧುಸೂದನ್‌ನನ್ನು ಮಾತ್ರ ಬಂಧಿಸಿರುವುದಾಗಿ ತಿಳಿಸಿದ್ದಾರೆ.
Next Story





