ನಾನು ಕ್ರೀಡಾಂಗಣದಲ್ಲಿ ಜೋಕ್ ಮಾಡುವುದಿಲ್ಲ :ಧೋನಿ

ಶ್ರೀನಗರ, ನ.28: ‘‘ಕ್ರೀಡಾಂಗಣಕ್ಕೆ ಆಡಲು ಇಳಿದರೆ ನಾನು ಜೋಕ್ ಮಾಡುವುದಿಲ್ಲ. ಆದರೆ ಡ್ರೆಸ್ಸಿಂಗ್ ರೂಂನ ಒಳಗೆ ತಂಡದ ಸದಸ್ಯರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವುದಾಗಿ ಭಾರತದ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ಇತ್ತೀಚೆಗೆ ಸುರೇಶ್ ರೈನಾ ನೀಡಿದ್ದ ಹೇಳಿಕೆಗೆ ಧೋನಿ ಪ್ರತಿಕ್ರಿಯೆ ನೀಡಿದ್ದಾರೆ.
ಧೋನಿ ನಿಜವಾಗಿಯೂ ‘ಕ್ಯಾಪ್ಟನ್ ಕೂಲ್’ ಅಲ್ಲ. ಅವರಿಗೂ ಕೋಪ ಬರುತ್ತದೆ.ಕ್ಯಾಮರಾದ ಮುಂದೆ ಏನನ್ನು ಮಾತನಾಡುವುದಿಲ್ಲ. ಕ್ಯಾಮರಾ ಇಲ್ಲದಾಗ ಅವರ ವರ್ತನೆ ಬೇರೆಯಾಗಿರುತ್ತದೆ ’’ ಎಂದು ರೈನಾ ಅವರು ‘ಬ್ರೇಕ್‌ಫಾಸ್ಟ್ ವಿಥ್ ಚಾಂಪಿಯನ್ಸ್’ ನಡೆಸಿದ ಸಂದರ್ಶನದಲ್ಲಿ ಧೋನಿಯ ಇನ್ನೊಂದು ಮುಖವನ್ನು ಪರಿಚಯಿಸಿದ್ದರು.
ರೈನಾ ಹೇಳಿಕೆಗೆ ಉತ್ತರ ಕಾಶ್ಮೀರದಲ್ಲಿ ಇಂಡಿಯನ್ ಆರ್ಮಿ ಏರ್ಪಡಿಸಿದ್ದ ಸಮಾರಂಭದಲ್ಲಿ ಧೋನಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಧೋನಿ ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ತಂಡಗಳ ದ್ವಿಪಕ್ಷೀಯ ಸರಣಿ ಆಯೋಜಿಸುವ ಬಗ್ಗೆ ಮಾತನಾಡಿದರು. ‘‘ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್ ಸರಣಿ ಆಯೋಜಿಸುವುದು ಸುಲಭವಲ್ಲ. ಅದೊಂದು ರಾಜಕೀಯ ಮತ್ತು ರಾಜತಾಂತ್ರಿಕ ನಿರ್ಧಾರವಾಗಿದೆ ’’ ಎಂದರು.
" ಸರಣಿ ಆಯೋಜಿಸುವ ನಿರ್ಧಾರ ಸರಕಾರಕ್ಕೆ ಬಿಟ್ಟ ವಿಚಾರ. ಒಂದು ವೇಳೆ ಸರಕಾರ ಆಡಲು ಅನುಮತಿ ನೀಡಿದರೇ. ನಮಗೆ ಅಲ್ಲಿಗೆ ಹೋಗಿ ಆಡಲು ಸಾಧ್ಯ. ಸರಕಾರ ಇದಕ್ಕೆ ವಿರುದ್ಧವಾಗಿ ನಿರ್ಧಾರ ಕೈಗೊಂಡರೆ. ನಾವು ಆ ಬಗ್ಗೆ ಯೋಚಿಸದೆ ಬೇರೆ ಸರಣಿಗಳಲ್ಲಿ ಆಡುವುದಾಗಿ ಧೋನಿ ಅಭಿಪ್ರಾಯಪಟ್ಟರು.







