ಕೇರಳ ಐತಿಹಾಸಿಕ ಸಾಧನೆ

ರೋಹ್ಟಕ್, ನ.28: ಕೇರಳ ಕ್ರಿಕೆಟ್ ತಂಡ ರಣಜಿ ಟ್ರೋಫಿಯಲ್ಲಿ ಇದೇ ಮೊದಲ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
‘ಬಿ’ ಗುಂಪಿನಲ್ಲಿ 6 ಪಂದ್ಯಗಳಲ್ಲಿ 5ರಲ್ಲಿ ಜಯ,1ರಲ್ಲಿ ಸೋತಿರುವ ಕೇರಳ ಒಟ್ಟು 30 ಅಂಕ ಗಳಿಸಿ ಎರಡನೇ ಸ್ಥಾನ ಪಡೆದು ಅಂತಿಮ-8ರ ಸುತ್ತಿಗೆ ಪ್ರವೇಶಿಸಿದೆ. ‘ಬಿ’ ಗುಂಪಿನಲ್ಲಿ 6 ಪಂದ್ಯಗಳಲ್ಲಿ 5ರಲ್ಲಿ ಜಯ, 1ರಲ್ಲಿ ಡ್ರಾ ಸಾಧಿಸಿರುವ ಹಾಲಿ ಚಾಂಪಿಯನ್ ಗುಜರಾತ್ ಒಟ್ಟು 34 ಅಂಕ ಗಳಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದು, ಬಂಗಾಳ ತಂಡವನ್ನು ಎದುರಿಸಲಿದೆ.
ಆಸ್ಟ್ರೇಲಿಯದ ಡೇವ್ ವಾಟ್ಮೋರೆ ಮಾರ್ಗದರ್ಶನದಲ್ಲಿ ಈ ಬಾರಿಯ ರಣಜಿಗೆ ತಯಾರಿ ನಡೆಸಿದ್ದ ಕೇರಳ ತಂಡ ಇಂದು ಹರ್ಯಾಣ ವಿರುದ್ಧದ ‘ಬಿ’ ಗುಂಪಿನ ಪಂದ್ಯವನ್ನು ಇನಿಂಗ್ಸ್ ಹಾಗೂ 8 ರನ್‌ಗಳಿಂದ ಗೆದ್ದುಕೊಂಡಿತು. ಗುಜರಾತ್ ತಂಡ ಜಾರ್ಖಂಡ್ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿತು.
ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ ಒಡಿಶಾವನ್ನು 7 ವಿಕೆಟ್‌ಗಳಿಂದ ಮಣಿಸಿರುವ ಮಧ್ಯಪ್ರದೇಶ ತಂಡ ನಾಕೌಟ್ ಹಂತಕ್ಕೇರಿತು. 6 ಪಂದ್ಯಗಳಲ್ಲಿ 3ರಲ್ಲಿ ಜಯ ಸಾಧಿಸಿ 21 ಅಂಕ ಗಳಿಸಿರುವ ಮಧ್ಯಪ್ರದೇಶ ‘ಸಿ’ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯಿತು.
ಗೋವಾ ವಿರುದ್ಧ ಡ್ರಾ ಸಾಧಿಸಿರುವ ಬಂಗಾಳ ತಂಡ 23 ಅಂಕ ಗಳಿಸಿ ‘ಡಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಿತು. ಈ ಮೂಲಕ ಕ್ವಾರ್ಟರ್‌ಫೈನಲ್‌ಗೆ ತೇರ್ಗಡೆಯಾಯಿತು.







