ಭಾರತದ ಬೌಲಿಂಗ್ ವಿಭಾಗಕ್ಕೆ ಹೊಸ ಅಸ್ತ್ರ ಸಿದ್ಧಾರ್ಥ್ ಕೌಲ್

ಚೆನ್ನೈ, ನ.28: ಶ್ರೀಲಂಕಾ ವಿರುದ್ಧ ಮುಂದಿನ ತಿಂಗಳು ಆರಂಭವಾಗಲಿರುವ ಏಕದಿನ ಸರಣಿಗೆ ಪಂಜಾಬ್‌ನ ವೇಗದ ಬೌಲರ್ ಸಿದ್ಧಾರ್ಥ್ ಕೌಲ್ ಆಯ್ಕೆಯಾಗಿದ್ದಾರೆ. 2008ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತದ ಅಂಡರ್-19 ತಂಡ ವಿಶ್ವಕಪ್ ಜಯಿಸಿದ್ದಾಗ ಕೌಲ್ ತನ್ನ ಅಮೋಘ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದರು. ಇದೀಗ ವಿರಾಟ್ ವಿಶ್ವಶ್ರೇಷ್ಠ ಆಟಗಾರನಾಗಿ ಬೆಳೆದಿದ್ದಾರೆ. ಸಿದ್ಧಾರ್ಥ್ ಈಗಲೂ ದೇಶೀಯ ಕ್ರಿಕೆಟ್‌ನಲ್ಲಿ ಬೆವರಿಳಿಸುತ್ತಿದ್ದಾರೆ. 50 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಕೌಲ್ 26.82ರ ಸರಾಸರಿಯಲ್ಲಿ ಒಟ್ಟು 175 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ತನ್ನ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳಲು ಕೌಲ್ ಪ್ರಸಿದ್ಧ ಮಾನಸಿಕ ಸದೃಢ ಕೋಚ್ ಅಮಿತ್ ಭಟ್ಟಾಚಾರ್ಯರಿಂದ ತರಬೇತಿ ಪಡೆದಿದ್ದಾರೆ. 2017ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ 10 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸಿದ್ದ ಕೌಲ್ ಆಯ್ಕೆಗಾರರ ಗಮನ ಸೆಳೆದಿದ್ದರು.
Next Story





