ಭಾರತಕ್ಕೆ ಪಾಕಿಸ್ತಾನ ಮೊದಲ ಎದುರಾಳಿ
ಕಾಮನ್ ವೆಲ್ತ್ ಗೇಮ್ಸ್ ಹಾಕಿ
.jpg)
► ಆಸ್ಟ್ರೇಲಿಯದ ಗೋಲ್ಡ್ ಕೋಸ್ಟ್‌ನಲ್ಲಿ ಎ.5ರಿಂದ ಕ್ರೀಡಾಕೂಟ
ಗೋಲ್ಡ್ ಕೋಸ್ಟ್, ನ.28: ಕಳೆದ ಆವೃತ್ತಿಯಲ್ಲಿ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಜಯಿಸಿದ್ದ ಭಾರತದ ಪುರುಷರ ಹಾಕಿ ತಂಡ 2018ರ ಗೋಲ್ಡ್‌ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್ ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆೆ.
ಹನ್ನೊಂದನೇ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ ಎ.5ರಿಂದ 14ರ ತನಕ ನಡೆಯಲಿದೆ.
ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಎಚ್) ಮಂಗಳವಾರ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಏಷ್ಯನ್ ಚಾಂಪಿಯನ್ ಭಾರತ 'ಬಿ' ಗುಂಪಿನಲ್ಲಿ ಪಾಕಿಸ್ತಾನ, ಕಳೆದ ಆವೃತ್ತಿಯಲ್ಲಿ ಕಂಚು ಪಡೆದ ಇಂಗ್ಲೆಂಡ್, ಮಲೇಷ್ಯ ಮತ್ತು ವೇಲ್ಸ್ ತಂಡದೊಂದಿಗೆ ಸ್ಥಾನ ಪಡೆದಿದೆ.
ಐದು ಬಾರಿ ಚಾಂಪಿಯನ್ ಆಗಿರುವ ಆತಿಥೇಯ ಆಸ್ಟ್ರೇಲಿಯ ತಂಡ ನ್ಯೂಝಿಲೆಂಡ್, ದಕ್ಷಿಣ ಆಫ್ರಿಕ, ಕೆನಡಾ ಮತ್ತು ಸ್ಕಾಟ್ಲೆಂಡ್ ತಂಡದ ಜೊತೆ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ.
ಭಾರತ ಮೊದಲ ಪಂದ್ಯದಲ್ಲಿ ಎ.7ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಎ.8 ವೇಲ್ಸ್, ಎ.10 ಮಲೇಷ್ಯಾ ಮತ್ತು ಎ.11ರಂದು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಇದೇ ವೇಳೆ ಭಾರತದ ಮಹಿಳಾ ಹಾಕಿ ತಂಡ 'ಎ' ಗುಂಪಿನಲ್ಲಿ ಅವಕಾಶ ಗಿಟ್ಟಿಸಿಕೊಂಡಿದೆ. ಕಳೆದ ಬಾರಿ ಬೆಳ್ಳಿ ಪಡೆದಿದ್ದ ಇಂಗ್ಲೆಂಡ್, ದಕ್ಷಿಣ ಆಫ್ರಿಕ, ಮಲೇಷ್ಯಾ ಮತ್ತು ವೇಲ್ಸ್ 'ಎ' ಗುಂಪಿನಲ್ಲಿರುವ ಇತರ ತಂಡಗಳು.
ಎ.5ರಂದು ಭಾರತದ ಮಹಿಳಾ ಹಾಕಿ ತಂಡ ವೇಲ್ಸ್ ತಂಡವನ್ನು ಎದುರಿಸಲಿದೆ. ಎ.6ರಂದು ಮಲೇಷ್ಯಾ, ಎ.8ರಂದು ಇಂಗ್ಲೆಂಡ್ ಮತ್ತು ಎ.10ರಂದು ದಕ್ಷಿಣ ಆಫ್ರಿಕ ತಂಡವನ್ನು ಎದುರಿಸಲಿದೆ. ಪುರುಷರ ಹಾಕಿಯಲ್ಲಿ ಆಸ್ಟ್ರೇಲಿಯ ಕಾಮನ್‌ವೆಲ್ತ್ ಗೇಮ್ಸ್‌ನ ಐದು ಆವೃತ್ತಿಗಳಲ್ಲಿ ಐದು ಬಾರಿ ಪ್ರಶಸ್ತಿ ಜಯಿಸಿರುವ ತಂಡವಾಗಿದೆ. ಇತ್ತೀಚೆಗೆ ಏಷ್ಯನ್ ಗೇಮ್ಸ್‌ನಲ್ಲಿ ಚಾಂಪಿಯನ್ ಆಗಿರುವ ಭಾರತ ಕಾಮನ್‌ವೆಲ್ತ್ ಗೇಮ್ಸ್‌ನ ಎರಡು ಆವೃತ್ತಿಗಳಲ್ಲಿ ಬೆಳ್ಳಿ ಗೆದ್ದುಕೊಂಡಿತ್ತು. ಮಹಿಳೆಯರ ಹಾಕಿಯಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ತವರಿನ ಅಭಿಮಾನಿಗಳ ಮುಂದೆ ಮತ್ತೊಮ್ಮೆ ಪ್ರಶಸ್ತಿ ಜಯಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಿದೆ. ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿವೆೆ.
ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ತಂಡಗಳು ಸೆಮಿಫೈನಲ್‌ಗೆ ನೇರವಾಗಿ ಪ್ರವೇಶ ಪಡೆದಿವೆೆ. ಉಳಿದ ತಂಡಗಳು ವರ್ಗೀಕೃತ ಪಂದ್ಯಗಳ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿವೆೆ.
ಮಹಿಳಾ ತಂಡಗಳ ಸೆಮಿಫೈನಲ್ ಪಂದ್ಯ ಎ.12ರಂದುಹಾಗೂ ಪುರುಷ ತಂಡಗಳ ಸೆಮಿಫೈನಲ್ ಪಂದ್ಯಗಳು ಎ.13ರಂದು ನಿಗದಿಯಾಗಿದೆ.
ಪುರುಷ ಮತ್ತು ಮಹಿಳಾ ತಂಡಗಳ ತೃತೀಯ ಸ್ಥಾನ (ಕಂಚು) ಮತ್ತು ಫೈನಲ್ ಪಂದ್ಯ ಎ.14ರಂದು ನಡೆಯಲಿದೆ.







