ಸಿಪಿಐ(ಎಂ) ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ನಡೆಸಲು ಕಟಿಬದ್ಧ: ಚನ್ನರಾಯಪ್ಪ

ಬಾಗೇಪಲ್ಲಿ, ನ.29: ಸಿಪಿಐ(ಎಂ) ಈ ದೇಶದ ರಕ್ಷಣೆಯ ಬಗ್ಗೆ ಜವಾಬ್ದಾರಿ ಇರುವ ಏಕೈಕ ಪಕ್ಷವಾಗಿದ್ದು, ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ನಡೆಸಲು ಕಟಿಬದ್ಧವಾಗಿದೆ ಎಂದು ಸಿಪಿಐ(ಎಂ) ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಚನ್ನರಾಯಪ್ಪ ತಿಳಿಸಿದ್ದಾರೆ.
ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಈ ಭಾಗದಲ್ಲಿ ಸಿಪಿಐ(ಎಂ) ಶಾಸಕರು ಅಧಿಕಾರದಲ್ಲಿದ್ದಾಗ ರಚನಾತ್ಮಕ ಕಾರ್ಯಗಳು ಅನುಷ್ಠಾನವಾಗಿವೆ. ಆದರೆ ರಾಜಕೀಯ ಸ್ಥಿತಿ ಏರುಪೇರಾದ ಕಾರಣ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರ ಯಾವುದೇ ಕೆಲಸವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಸಿಪಿಐ(ಎಂ) ತಾಲೂಕು ಸಮಿತಿ ನಿರಂತರವಾಗಿ ಹೋರಾಟಗಳನ್ನು ಮಾಡಲು ರೂಪುರೇಷೆಗಳನ್ನು ಸಿದ್ಧಮಾಡುತ್ತಿದೆ ಎಂದರು.
ಈ ವೇಳೆ ತಾಲೂಕು ಸಮಿತಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾಗಿ ಚನ್ನರಾಯಪ್ಪ, ಕಾರ್ಯಕಾರಿ ಮಂಡಲಿ ಸದಸ್ಯರಾಗಿ ಮೊಹಮ್ಮದ್ ಅಕ್ರಂ, ಆರ್. ಚಂದ್ರಶೇಖರರೆಡ್ಡಿ, ಎ.ಎನ್. ಶ್ರೀರಾಮಪ್ಪ, ಎಲ್. ವೆಂಕಟೇಶ್, ಡಿ.ಅಶ್ವತ್ಥನಾರಾಯಣ ಆಯ್ಕೆಯಾಗಿದ್ದು, ಸಮಿತಿ ಸದಸ್ಯರಾಗಿ ಬಿ. ಶ್ರೀನಿವಾಸ್, ಜಿ.ಮುಸ್ತಾಪಾ, ಬಾಷಾಸಾಬ್, ನಾರಾಯಣಸ್ವಾಮಿ, ಬೈರಾರೆಡ್ಡಿ, ಬಿ.ಆಂಜನೇಯರೆಡ್ಡಿ, ಪಿ.ಓಬಳ ರಾಜು, ಹೇಮಾಚಂದ್ರ, ಜಿ.ಎ. ವೇಣುಗೋಪಾಲ, ಎಸ್.ವಿ. ವೆಂಕಟರಾಯಪ್ಪ, ರಾಮಾಂಜಿ, ಜೈನಾಭಿ, ಶ್ರೀರಾಮನಾಯಕ, ಗೋವರ್ಧನಾಚಾರಿ ಅರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಪಿಪಿ(ಎಂ) ಪ್ರಧಾನ ಕಾರ್ಯದರ್ಶಿಯಾಗಿ ಚನ್ನರಾಯಪ್ಪ, ಕಾರ್ಯಕಾರಿ ಮಂಡಲಿ ಸದಸ್ಯರಾಗಿ ಮೊಹಮ್ಮದ್ ಅಕ್ರಂ, ಆರ್. ಚಂದ್ರಶೇಖರರೆಡ್ಡಿ, ಎ.ಎನ್. ಶ್ರೀರಾಮಪ್ಪ, ಎಲ್. ವೆಂಕಟೇಶ್, ಡಿ.ಅಶ್ವತ್ಥನಾರಾಯಣ, ಜಿ.ಮುಸ್ತಾಪಾ, ಬೈರಾರೆಡ್ಡಿ, ಬಿ.ಆಂಜನೇಯರೆಡ್ಡಿ, ಹೇಮಾಚಂದ್ರ, ಜಿ.ಎ. ವೇಣುಗೋಪಾಲ, ರಾಮಾಂಜಿ, ಜೈನಾಭಿ, ಶ್ರೀರಾಮನಾಯಕ, ಮತ್ತಿತರರು ಹಾಜರಿದ್ದರು.







