ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾಟಕ್ಕೆ ಶಾನ್‌ವಾಝ್ ಹಮೀದ್, ಮುಹಮ್ಮದ್ ಅಶ್ಫಾಕ್ ಆಯ್ಕೆ

ಮಂಗಳೂರು,ನ.29: ದ.ಕ.ಜಿಲ್ಲಾ ಕ್ರೀಡಾ ಅಭಿವೃದ್ಧಿ ಸಮಿತಿ ಮತ್ತು ಮಂಗಳಾ ಕ್ರೀಡಾಂಗಣದ ನಿರ್ದೇಶಕ ಸಾಜಿದ್ ಉಳ್ಳಾಲರಿಂದ ತರಬೇತಿ ಪಡೆದಿರುವ ಯು.ಎಂ. ಶಾನ್‌ವಾಝ್ ಹಮೀದ್ ಮತ್ತು ಮುಹಮ್ಮದ್ ಅಶ್ಫಾಕ್ ಡಿ.7ರಂದು ಜಮ್ಮುವಿನಲ್ಲಿ ನಡೆಯುವ ಎಸ್‌ಜಿಎಫ್‌ಐ ರಾಷ್ಟ್ರಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





